HomeEntertainmentಕೃತಿ ಸನೋನ್ ರಾಖಿ ಜಾಹೀರಾತು ವಿವಾದ: ನೆಟ್ಟಿಗರ ಆಕ್ರೋಶಕ್ಕೆ ಮಣಿದ GIVA

ಕೃತಿ ಸನೋನ್ ರಾಖಿ ಜಾಹೀರಾತು ವಿವಾದ: ನೆಟ್ಟಿಗರ ಆಕ್ರೋಶಕ್ಕೆ ಮಣಿದ GIVA

For Dai;y Updates Join Our whatsapp Group

ಬೆಂಗಳೂರು: ರಕ್ಷಾಬಂಧನದ ಹಿನ್ನೆಲೆಯಲ್ಲಿ GIVA ಬಿಡುಗಡೆ ಮಾಡಿದ್ದ ಕೃತಿ ಸನೋನ್ ಅಭಿನಯದ ಜಾಹೀರಾತು ಇದೀಗ ವಿವಾದದ ಕೇಂದ್ರವಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪಗಳ ನಡುವೆ ಸಂಸ್ಥೆ ತನ್ನ ಜಾಹೀರಾತನ್ನು ಎಲ್ಲಾ ಮಾಧ್ಯಮ ವೇದಿಕೆಗಳಿಂದ ಹಿಂಪಡೆದುಕೊಂಡಿದೆ.

ಜಾಹೀರಾತಿನ ಪ್ರಮುಖ ಪರಿಕಲ್ಪನೆಯೇ ವಿವಾದಕ್ಕೆ ಕಾರಣವಾಗಿದೆ. ಕೃತಿ ಸನೋನ್ ತಮ್ಮ ಸಹೋದರನಿಗೆ ರಾಖಿ ಕಟ್ಟಿದ ಬಳಿಕ ಸಾಕು ನಾಯಿಗೂ ರಾಖಿ ಕಟ್ಟುವ ದೃಶ್ಯವನ್ನು ಜಾಹೀರಾತಿನಲ್ಲಿ ತೋರಿಸಲಾಗಿತ್ತು.

ಈ ದೃಶ್ಯ ಭಾರತೀಯ ರಕ್ಷಾಬಂಧನ ಸಂಪ್ರದಾಯವನ್ನು ಲಘುವಾಗಿ ಬಿಂಬಿಸುತ್ತದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರ ನಡುವೆಯೇ ಕೃತಿ ಸನೋನ್ ಅವರ ಉಡುಪಿನ ಬಗ್ಗೆಯೂ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಬಿಳಿ ಬಣ್ಣದ ಬ್ರಾಲೆಟ್ ಶೈಲಿಯ ಡೀಪ್ ವಿ-ನೆಕ್ ಬ್ಲೌಸ್, ಕೇಪ್ ಮತ್ತು ಸ್ಕರ್ಟ್ ಒಳಗೊಂಡ ಮಾಡರ್ನ್ ಲುಕ್ ರಕ್ಷಾಬಂಧನದಂತಹ ಸಾಂಪ್ರದಾಯಿಕ ಹಬ್ಬಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು.

ವಿವಾದ ಹೆಚ್ಚಾಗುತ್ತಿದ್ದಂತೆ GIVA ಸ್ಪಷ್ಟನೆ ನೀಡಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಹಬ್ಬಗಳಿಗೆ ಸಂಸ್ಥೆ ಸದಾ ಗೌರವ ನೀಡುತ್ತದೆ. ಕುಟುಂಬದೊಂದಿಗೆ ಆಚರಿಸುವ ಹಬ್ಬದ ಸಂಭ್ರಮವನ್ನು ಸಾಕುಪ್ರಾಣಿಗಳಿಗೂ ವಿಸ್ತರಿಸುವ ಉದ್ದೇಶದಿಂದ ಈ ಜಾಹೀರಾತು ರೂಪಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ.

ಆದರೆ ಜಾಹೀರಾತಿನಿಂದ ಸಮಾಜದ ಯಾವುದೇ ವರ್ಗದ ಜನರ ಭಾವನೆಗಳಿಗೆ ನೋವಾಗಿದ್ದರೆ ಅದು ಉದ್ದೇಶಪೂರ್ವಕವಲ್ಲ ಎಂದು ತಿಳಿಸಿರುವ GIVA, ಜನರ ಭಾವನೆಗಳಿಗೆ ಗೌರವ ಸೂಚಿಸಿ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿರುವುದಾಗಿ ಘೋಷಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img