HomeGadag Newsವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ: ಹಲವು ಪ್ರದೇಶಗಳಲ್ಲಿ ಸೆ.9ರಂದು ವಿದ್ಯುತ್ ಸ್ಥಗಿತ

ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ: ಹಲವು ಪ್ರದೇಶಗಳಲ್ಲಿ ಸೆ.9ರಂದು ವಿದ್ಯುತ್ ಸ್ಥಗಿತ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: 110 ಕೆವ್ಹಿ ಮುಂಡರಗಿ, ಡಂಬಳ ಹಾಗೂ ಶಿಂಗಟಾಲೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.9ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗ, ಗದಗ ಪ್ರಕಟಣೆಯಲ್ಲಿ ತಿಳಿಸಿದೆ.

ಡಂಬಳ ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮಾರ್ಗಗಳು, 33 ಕೆವ್ಹಿ ವಾಟರ್‌ ಸಪ್ಲೈ ಮಾರ್ಗ ಹಾಗೂ 33 ಕೆವ್ಹಿ ಲಕ್ಕುಂಡಿ ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅಲ್ಲದೆ 110 ಕೆವ್ಹಿ ಐಪಿಪಿ ಮೆ. ಸುಜಲಾನ್ ಲಿ., ಹಾರೋಗೇರಿ, ಮೆ. ಎನರ್‌ಕಾನ್ ಲಿ., ಮೆ. ಅಕಿಲಾಗ್ಯಾ ಸೋಲಾರ್ ಹಾಗೂ ಮೆ. ಚುರ್ಚಿಹಾಳ ನೀರಾವರಿ ಮಾರ್ಗಗಳಿಗೂ ವ್ಯತ್ಯಯ ಉಂಟಾಗಲಿದೆ.

ಮುಂಡರಗಿ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ 110 ಕೆವ್ಹಿ ಐಪಿಪಿ ಮೆ. ವಿಜಯನಗರ ಶುಗರ್ಸ್ ಲಿ., ಮೆ. ಬೀಡನಾಳ, ನೀರಾವರಿ, ಶಿಂಗಟಾಲೂರು ಹಾಗೂ ಉಪ್ಪಿನ ಬೇಟಗೇರಿ ಮಾರ್ಗಗಳು ಸೇರಿದಂತೆ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮತ್ತು 33 ಕೆವ್ಹಿ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಶಿಂಗಟಾಲೂರು ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮಾರ್ಗಗಳಲ್ಲಿಯೂ ಇದೇ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮುಂಡರಗಿ, ಡಂಬಳ ಹಾಗೂ ಶಿಂಗಟಾಲೂರು ವಿದ್ಯುತ್ ವಿತರಣಾ ಕೇಂದ್ರಗಳಿಂದ ಪೂರೈಕೆಯಾಗುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ 11 ಕೆವ್ಹಿ ವಿತರಣಾ ಮಾರ್ಗಗಳಿಗೂ ವಿದ್ಯುತ್ ವ್ಯತ್ಯಯದ ಪರಿಣಾಮ ಇರಲಿದೆ. ಸಾರ್ವಜನಿಕರು ಈ ಪ್ರಕಟಣೆಯನ್ನು ಗಮನಿಸಿ ಹೆಸ್ಕಾಂನೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಹುವಿಸಕಂನಿ., ಗದಗ ಅವರು ಮನವಿ ಮಾಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img