HomeKarnataka Newsರೈತರೇ ಗಮನಿಸಿ.. PM-KISAN 24ನೇ ಕಂತಿನ ಹಣ ಯಾವಾಗ ಬಿಡುಗಡೆ? ಖಾತೆಗೆ ₹2,000 ಬರಲು ಈ...

ರೈತರೇ ಗಮನಿಸಿ.. PM-KISAN 24ನೇ ಕಂತಿನ ಹಣ ಯಾವಾಗ ಬಿಡುಗಡೆ? ಖಾತೆಗೆ ₹2,000 ಬರಲು ಈ ಕೆಲಸ ಕಡ್ಡಾಯ

For Dai;y Updates Join Our whatsapp Group

ಪಿಎಂ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣಕ್ಕಾಗಿ ರೈತರು ಎದುರು ನೋಡುತ್ತಿದ್ದಾರೆ. ಜೂನ್ ತಿಂಗಳಲ್ಲಿ 23ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಮುಂದಿನ ಕಂತು ಈ ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೆಲ ವರದಿಗಳ ಪ್ರಕಾರ ನವೆಂಬರ್‌ನಲ್ಲಿ ಈ ಕಂತಿನ ಹಣ ರೈತರ ಖಾತೆಗೆ ಜಮೆಯಾಗುವ ಸಾಧ್ಯತೆಯೂ ಇದೆ.

ಈ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ ಒಟ್ಟು ₹6,000 ನೆರವು ಸಿಗುತ್ತದೆ. ಇದನ್ನು ತಲಾ ₹2,000 ರಂತೆ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಪ್ರತಿ ವರ್ಷ ಮೂರನೇ ಕಂತಿನ (ಅಕ್ಟೋಬರ್-ನವೆಂಬರ್) ಹಣವನ್ನು ಸಾಮಾನ್ಯವಾಗಿ ಹಬ್ಬಗಳ ಸೀಸನ್‌ನಲ್ಲಿ ಬಿಡುಗಡೆ ಮಾಡುವುದು ವಾಡಿಕೆ.

ಇ-ಕೆವೈಸಿ ಕಡ್ಡಾಯ
24ನೇ ಕಂತಿನ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ಪಡೆಯಲು ರೈತರು ತಮ್ಮ ಪಿಎಂ-ಕಿಸಾನ್ ಖಾತೆಗೆ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿರುವುದು ಮತ್ತು ಎನ್‌ಪಿಸಿಐ (NPCI/DBT) ಸಕ್ರಿಯಗೊಂಡಿರುವುದನ್ನು ರೈತರು ಖಚಿತಪಡಿಸಿಕೊಳ್ಳಬೇಕು.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ವಿಧಾನ
ಪಿಎಂ-ಕಿಸಾನ್ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ, ಮುಖಪುಟದ ‘Farmers Corner’ ವಿಭಾಗದಡಿ ‘Beneficiary Status’ ಅಥವಾ ‘Beneficiary List’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ ‘Get Report’ ಬಟನ್ ಕ್ಲಿಕ್ ಮಾಡಿದರೆ, ಆ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಈ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ರೈತರು ಪರಿಶೀಲಿಸಬಹುದು.

ಇ-ಕೆವೈಸಿ ಪೂರ್ಣಗೊಳ್ಳದಿದ್ದರೆ ಅಥವಾ ಬ್ಯಾಂಕ್ ಖಾತೆ ಲಿಂಕ್ ಆಗದಿದ್ದರೆ ಕಂತಿನ ಹಣ ತಡೆಹಿಡಿಯಲ್ಪಡುವ ಸಾಧ್ಯತೆ ಇರುವುದರಿಂದ, ರೈತರು ಹತ್ತಿರದ ಸಿಎಸ್‌ಸಿ (CSC) ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಪಿಎಂ-ಕಿಸಾನ್ ಆಪ್ ಮೂಲಕ ತಕ್ಷಣ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img