HomeKarnataka Newsಬೆಂಗಳೂರಿನಲ್ಲಿ SIR ವಿರುದ್ಧ ಸಿಜೆಪಿ ಪ್ರೊಟೆಸ್ಟ್: ಚುನಾವಣಾ ಆಯೋಗದ ವಿರುದ್ಧ ದೀಪ್ಕೆ, ಧ್ರುವ್ ರಾಠಿ, ಪ್ರಕಾಶ್​...

ಬೆಂಗಳೂರಿನಲ್ಲಿ SIR ವಿರುದ್ಧ ಸಿಜೆಪಿ ಪ್ರೊಟೆಸ್ಟ್: ಚುನಾವಣಾ ಆಯೋಗದ ವಿರುದ್ಧ ದೀಪ್ಕೆ, ಧ್ರುವ್ ರಾಠಿ, ಪ್ರಕಾಶ್​ ರಾಜ್​​ ಕಿಡಿ!

For Dai;y Updates Join Our whatsapp Group

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಈ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.

ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳು ಎಸ್‌ಐಆರ್‌ ವಿರುದ್ಧ ಪ್ರತಿಭಟನೆ ಮುಂದುವರಿಸಿರುವ ಬೆನ್ನಲ್ಲೇ, ಬೆಂಗಳೂರಿನಲ್ಲೂ ಈ ವಿಚಾರವಾಗಿ ಪ್ರತಿಭಟನೆ ನಡೆಯಿತು. ಕಾಕ್ರೋಚ್‌ ಜನತಾ ಪಾರ್ಟಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಯೂಟ್ಯೂಬರ್ ಧ್ರುವ್ ರಾಠಿ, ನಟ ಪ್ರಕಾಶ್ ರಾಜ್, ಕಿಶೋರ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.

13 ಕೋಟಿ ಮತದಾರರ ವಿಚಾರ ಪ್ರಸ್ತಾಪಿಸಿದ ಅಭಿಜಿತ್ ದೀಪ್ಕೆ:

ಪ್ರತಿಭಟನೆಯಲ್ಲಿ ಮಾತನಾಡಿದ ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಎಸ್‌ಐಆರ್‌ ಪ್ರಕ್ರಿಯೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಈಗಾಗಲೇ 13 ಕೋಟಿ ಮತದಾರರನ್ನು ಕೈ ಬಿಡಲು ಮುಂದಾಗಿದ್ದಾರೆ. ಇದು ಶೇ 13ರಷ್ಟು ಮತ ಪ್ರಮಾಣವಾಗುತ್ತದೆ. ಅದಕ್ಕಾಗಿಯೇ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ’ ಎಂದು ಅವರು ಆರೋಪಿಸಿದರು. ಚುನಾವಣೆಯಲ್ಲಿ ಅಲ್ಪ ಅಂತರದ ಗೆಲುವುಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಕೆಲವೆಡೆ 15 ಸಾವಿರ ಮತಗಳ ಅಂತರದಲ್ಲಿ ಸೋಲು-ಗೆಲುವು ನಿರ್ಧಾರವಾಗಿದೆ. ‘ನಮ್ಮನ್ನು ಜಿರಳೆಗಳು ಎಂದು ಕರೆಯುತ್ತಾರೆ. ಹಾಗೆ ಇರುವುದಕ್ಕೆ ಇಷ್ಟಪಡುತ್ತೇವೆ’ ಎಂದರು.

ಆಡಳಿತ ಬದಲಾವಣೆಗಾಗಿ ಬಂದಿಲ್ಲ ಎಂದ ಧ್ರುವ್ ರಾಠಿ:

ಪ್ರತಿಭಟನೆಯಲ್ಲಿ ಮಾತನಾಡಿದ ಯೂಟ್ಯೂಬರ್ ಧ್ರುವ್ ರಾಠಿ, ತಾವು ಆಡಳಿತ ಬದಲಾವಣೆಗಾಗಿ ಪ್ರತಿಭಟನೆಗೆ ಬಂದಿಲ್ಲ ಎಂದು ಹೇಳಿದರು.

ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕಾಣಿಸುತ್ತಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌ಐಆರ್‌ ರದ್ದುಪಡಿಸುವವರೆಗೂ ಹೋರಾಟ: ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ ಮಾತನಾಡಿ,  ‘ಎಸ್​ಐಆರ್​​ ಪ್ರತಿಕ್ರಿಯೆ ರದ್ದುಗೊಳಿಸುವವರೆಗೂ ಹೋರಾಟ ಮಾಡುತ್ತೇವೆ. ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ರದ್ದುಗೊಳಿಸಿವುದು ಮಾತ್ರವಲ್ಲ, ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಅವರು ಗುಡುಗಿದರು.

‘ನಿಮ್ಮ ವೋಟ್ ಡಿಲೀಟ್ ಆಗಿದೆ ಅಂತ ತಲೆಕೆಡಿಸಿಕೊಳ್ಳಬೇಡಿ. ವೋಟ್ ಕೇಳಬೇಕಾದರೆ ನಮ್ಮ ಹತ್ತಿರ ಬರುತ್ತಾರೆ. ಈಗ ನಮ್ಮ ಆಫೀಸ್​​ಗಳ ಸುತ್ತ ಓಡಾಡುತ್ತಿದ್ದಾರೆ. ನಾವು ಅದಕ್ಕೆ ಆಸ್ಪದ ಕೊಡುವುದಿಲ್ಲ. 13 ಕೋಟಿ ಮತದಾರರಿಗೆ ಕೋಕ್ ಕೊಟ್ಟಿದ್ದಾರೆ. ಬುಡಕಟ್ಟು ಜನಾಂಗದವರನ್ನು, ಮುಸ್ಲಿಂ ಮತ್ತು ಅಲ್ಪಸಂಖ್ಯಾತ ಮತದಾನವನ್ನು ಡಿಲೀಟ್ ಮಾಡುವ ಪ್ಲ್ಯಾನ್​​ ಮಾಡಿದ್ದಾರೆ’ ಎಂದು ಹೇಳಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img