HomeBengaluru NewsSSLC, 2nd PUC ವಿದ್ಯಾರ್ಥಿಗಳೇ ಗಮನಿಸಿ; 2027ರ ಪರೀಕ್ಷಾ ವೇಳಾಪಟ್ಟಿ ಪ್ರಕಟ!

SSLC, 2nd PUC ವಿದ್ಯಾರ್ಥಿಗಳೇ ಗಮನಿಸಿ; 2027ರ ಪರೀಕ್ಷಾ ವೇಳಾಪಟ್ಟಿ ಪ್ರಕಟ!

For Dai;y Updates Join Our whatsapp Group

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.

2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.

ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯಂತೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 22ರಿಂದ ಏಪ್ರಿಲ್ 3ರವರೆಗೆ ನಡೆಯಲಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಮೇ 24ರಿಂದ ಮೇ 31ರವರೆಗೆ ನಡೆಯಲಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ಪರೀಕ್ಷೆ-2 ಮೇ 3ರಿಂದ ಮೇ 15ರವರೆಗೆ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಗಮನಿಸಿ:

ಪರೀಕ್ಷೆ-1ರಲ್ಲಿ ಮಾರ್ಚ್ 22ರಂದು ಪ್ರಥಮ ಭಾಷೆಗಳ ಪರೀಕ್ಷೆ ನಡೆಯಲಿದೆ. ಮಾರ್ಚ್ 25ರಂದು ವಿಜ್ಞಾನ ಹಾಗೂ ರಾಜ್ಯಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿದೆ. ಮಾರ್ಚ್ 30ರಂದು ಗಣಿತ ಮತ್ತು ಸಮಾಜಶಾಸ್ತ್ರ ಪರೀಕ್ಷೆ ನಿಗದಿಯಾಗಿದೆ.

ಏಪ್ರಿಲ್ 2ರಂದು ವಿವಿಧ ಭಾಷೆಗಳ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 3ರಂದು ಜೆಟಿಎಸ್‌ ವಿಷಯಗಳು ಮತ್ತು ಅರ್ಥಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 5ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.

ಪರೀಕ್ಷೆ-2 ಮೇ 24ರಂದು ಪ್ರಥಮ ಭಾಷೆಯೊಂದಿಗೆ ಆರಂಭವಾಗಲಿದೆ. ಮೇ 25ರಂದು ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಸಂಗೀತ ವಿಷಯಗಳ ಪರೀಕ್ಷೆ ನಡೆಯಲಿದೆ. ಮೇ 26ರಂದು ಇಂಗ್ಲಿಷ್‌ ಮತ್ತು ಕನ್ನಡ, ಮೇ 27ರಂದು ಗಣಿತ ಹಾಗೂ ಸಮಾಜಶಾಸ್ತ್ರ ಪರೀಕ್ಷೆ ನಡೆಯಲಿದೆ.

ಮೇ 28ರಂದು ತೃತೀಯ ಭಾಷೆಗಳು ಮತ್ತು ಎನ್‌ಎಸ್‌ಕ್ಯುಎಫ್‌ ವಿಷಯಗಳು, ಮೇ 29ರಂದು ಸಮಾಜ ವಿಜ್ಞಾನ ಹಾಗೂ ಮೇ 31ರಂದು ಜೆಟಿಎಸ್‌ ವಿಷಯಗಳು ಮತ್ತು ಅರ್ಥಶಾಸ್ತ್ರ ಪರೀಕ್ಷೆ ನಡೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ಯಾವಾಗ?

ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಂದು ಕನ್ನಡ ಮತ್ತು ಅರೇಬಿಕ್‌ ವಿಷಯಗಳೊಂದಿಗೆ ಆರಂಭವಾಗಲಿದೆ. ಮಾರ್ಚ್ 1ರಂದು ಇಂಗ್ಲಿಷ್‌, ಮಾರ್ಚ್ 2ರಂದು ಪ್ರಾದೇಶಿಕ ಭಾಷೆಗಳ ಪರೀಕ್ಷೆ ನಡೆಯಲಿದೆ.

ಮಾರ್ಚ್ 3ರಂದು ಭೂಗೋಳಶಾಸ್ತ್ರ ಮತ್ತು ಮನಃಶಾಸ್ತ್ರ, ಮಾರ್ಚ್ 4ರಂದು ಸಮಾಜಶಾಸ್ತ್ರ ಮತ್ತು ಭೌತಶಾಸ್ತ್ರ, ಮಾರ್ಚ್ 5ರಂದು ಲೆಕ್ಕಶಾಸ್ತ್ರ ಪರೀಕ್ಷೆ ನಡೆಯಲಿದೆ.

ಮಾರ್ಚ್ 6ರಂದು ಮಹಾಶಿವರಾತ್ರಿ ಹಿನ್ನೆಲೆ ಪರೀಕ್ಷೆ ಇರುವುದಿಲ್ಲ. ಮಾರ್ಚ್ 8ರಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆ ನಡೆಯಲಿದೆ.

ಮಾರ್ಚ್ 9ರಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ, ಮಾರ್ಚ್ 11ರಂದು ಹಿಂದೂಸ್ತಾನಿ ಸಂಗೀತ ಹಾಗೂ ವೃತ್ತಿಪರ ವಿಷಯಗಳು, ಮಾರ್ಚ್ 12ರಂದು ವ್ಯವಹಾರ ಅಧ್ಯಯನ ಮತ್ತು ಗಣಿತ ಪರೀಕ್ಷೆ ನಡೆಯಲಿದೆ.

ಮಾರ್ಚ್ 13ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ ಮತ್ತು ಗೃಹವಿಜ್ಞಾನ, ಮಾರ್ಚ್ 15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಕಶಾಸ್ತ್ರ ಪರೀಕ್ಷೆ ನಡೆಯಲಿದೆ. ಮಾರ್ಚ್ 16ರಂದು ಇತಿಹಾಸ, ಸಂಖ್ಯಾಶಾಸ್ತ್ರ ಮತ್ತು ವಿದ್ಯುನ್ಮಾನ ಶಾಸ್ತ್ರ ಪರೀಕ್ಷೆ ನಡೆಯಲಿದ್ದು, ಮಾರ್ಚ್ 17ರಂದು ಹಿಂದಿ ಪರೀಕ್ಷೆಯೊಂದಿಗೆ ಪರೀಕ್ಷೆ-1 ಮುಕ್ತಾಯವಾಗಲಿದೆ.

ಬೆಳಗ್ಗೆ 10ಕ್ಕೆ ಪರೀಕ್ಷೆ ಆರಂಭ:

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯ ಎಲ್ಲಾ ಮುಖ್ಯ ಪರೀಕ್ಷೆಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿವೆ. ಹಿಂದೂಸ್ತಾನಿ ಸಂಗೀತ ಹಾಗೂ ಕೆಲವು ನಿರ್ದಿಷ್ಟ ವೃತ್ತಿಪರ ವಿಷಯಗಳ ಪರೀಕ್ಷೆಗಳಿಗೆ 2 ಗಂಟೆ 15 ನಿಮಿಷಗಳ ಅವಧಿ ನಿಗದಿಪಡಿಸಲಾಗಿದೆ.

ವಿದ್ಯಾರ್ಥಿಗಳು ತಾತ್ಕಾಲಿಕ ವೇಳಾಪಟ್ಟಿಯನ್ನು ಪರಿಶೀಲಿಸಿ, ಅಂತಿಮ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿದ್ದರೆ ಮಂಡಳಿಯ ಅಧಿಕೃತ ಮಾಹಿತಿಯನ್ನು ಗಮನಿಸುವುದು ಅಗತ್ಯ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img