HomeGadag Newsವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ
110 ಕೆವ್ಹಿ ಲಕ್ಷ್ಮೇಶ್ವರ ಹಾಗೂ 110 ಕೆವ್ಹಿ ಬೆಳ್ಳಟ್ಟಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಫೆ.22ರ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

110 ಕೆವ್ಹಿ ಲಕ್ಷ್ಮೇಶ್ವರ ಹಾಗೂ 110 ಕೆವ್ಹಿ ಬೆಳ್ಳಟ್ಟಿ ಉಪಕೇಂದ್ರಗಳಿಂದ ಪೂರೈಕೆಯಾಗುವ 110 ಕೆವ್ಹಿ ಬೆಳ್ಳಟ್ಟಿ-ಬಾಗೇವಾಡಿ ವಿದ್ಯುತ್ ಮಾರ್ಗ, 33 ಕೆವ್ಹಿ ಎಮ್‌ಎಮ್‌ಸಿಎಲ್ ಗಾಳಿಯಂತ್ರ ಘಟಕ ಮತ್ತು 33 ಕೆವ್ಹಿ ಸೊಮೆಶ್ವರ ಸ್ಪಿನ್ನಿಂಗ ಮಿಲ್ಲ್, ಸೋಲಾರ್-1, ಸೋಲಾರ್-2 ಹಾಗೂ 110 ಕೆವ್ಹಿ ಎನಾರಕಾನ್, 110 ಕೆವ್ಹಿ ಆದಿತ್ಯ ಬಿರ್ಲಾ ಸೋಲಾರ, 33 ಕೆವ್ಹಿ ಜಾಲವಾಡಗಿ ನೀರು ಸರಬರಾಜು ಉಪಕೇಂದ್ರ, 33 ಕೆವ್ಹಿ ಸೂರಣಗಿ ಉಪಕೇಂದ್ರ ಮತ್ತು 33 ಕೆವ್ಹಿ ಹೊಳೆಇಟಗಿ ಉಪಕೇಂದ್ರಗಳಿಂದ ಪೂರೈಸ್ಪಡುವ ಎಲ್ಲಾ ನಗರ, ಕೈಗಾರಿಕಾ, ಕುಡಿಯುವ ನೀರು ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ 11 ಕೆವ್ಹಿ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಸದರಿ ಪ್ರಕಟಣೆ ಗಮನಿಸಿ ಕಂಪನಿಯೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img