Homecultureಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಏ.9ಕ್ಕೆ

ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಏ.9ಕ್ಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಶ್ರೀ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶಿವಶರಣೆ ಗುಡ್ಡಾಪುರದ ದಾನಮ್ಮದೇವಿ ಪುರಾಣ ಪ್ರಾರಂಭೋತ್ಸವ ನೆರವೇರಲಿದೆ.

ಮಾ.25ರಿಂದ ಏಪ್ರಿಲ್ 4ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಶಿವಶರಣೆ ಗುಡ್ಡಾಪುರದ ಶ್ರೀ ದಾನಮ್ಮದೇವಿ ಪುರಾಣವನ್ನು ವೇ.ಮೂ. ಶಿವಲಿಂಗಯ್ಯ ಶಾಸ್ತಿçಗಳು ಹಿರೇಮಠ ಸಿದ್ದಾಪುರ ಅವರು ಪ್ರವಚನ ಮಾಡುವರು.

ಸಂಗಮೇಶ ಪಾಟೀಲ ಸಂಗೀತ ಸೇವೆ ನೀಡುವರು. ತೋಟೆಂದ್ರಕುಮಾರ ಕಟ್ಟಿಸಂಗಾವಿ ತಬಲಾ ಸಾಥ್ ನೀಡುವರು. ಏ.8ರಂದು ಸಂಜೆ 4 ಗಂಟೆಗೆ ಕುಂಭಮೇಳ ಜರುಗುವುದು.

ಏ. 9ರ ಯುಗಾದಿ ಪಾಡ್ಯದಂದು ಬೆಳಿಗ್ಗೆ 11.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಜರುಗುವುದು. ಸಂಜೆ 5.30ಗಂಟೆಗೆ ಮಹಾರಥೋತ್ಸವ, ರಾತ್ರಿ 9.30 ಗಂಟೆಗೆ ಶ್ರೀ ಗುರೂಜಿ ಮೆಲೋಡಿಸ್ ಇವೆಂಟ್ಸ್ ಗದಗ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಏ.5ರಂದು ಬೆಳಿಗ್ಗೆ 8.30 ಗಂಟೆಗೆ ಕಳಸಾರೋಹಣ, ಏ.5ರಿಂದ ಏ.10ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಏ.10ರಂದು ಸಂಜೆ 5.30 ಗಂಟೆಗೆ ಲಘು ರಥೋತ್ಸವ, ಏ. 5ರಿಂದ ಏ.7ರವರೆಗೆ ಬೆಳಿಗ್ಗೆ 9 ಗಂಟೆಗೆ ತಾಲೂಕು ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿ (14 ವರ್ಷದ ಒಳಗಿನವರಿಗೆ, 45 ಕೆಜಿ ತೂಕವುಳ್ಳವರಿಗೆ) ಜರುಗುವದು.

ಸಾಮೂಹಿಕ ವಿವಾಹಕ್ಕೆ ಏ.2ರ ಒಳಗಾಗಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ 9739233949, 9902598388, 8722701169,9880335813 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img