ವಿಜಯಪುರ: ಖಾಸಗಿ ಶಾಲಾ ವಾಹನ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂಡಿ ತಾ. ಅರಳದಿನ್ನಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಮಂಜುನಾಥ ಚೋಪಡೆ (5) ಮೃತ ಬಾಲಕನಾಗಿದ್ದು, ಬಸವರಾಜ್ ಅಂಗನವಾಡಿಗೆ ಹೊರಟಿದ್ದನು.
ರಸ್ತೆ ದಾಟುವ ವೇಳೆ ಬಾಲಕನ ಮೇಲೆ ಖಾಸಗಿ ಶಾಲಾ ವಾಹನ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಿಡಗುಂದಿಯ BMS ಶಾಲೆಯ ವಾಹನ ಹರಿದು ಬಸವರಾಜ್ ಮಂಜುನಾಥ ಚೋಪಡೆ ಸಾವನ್ನಪ್ಪಿದ್ದಾನೆ. 5 ವರ್ಷದ ಮಗನ ಸಾವನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ನಿಡಗುಂದಿ ಪಿಎಸ್‌ಐ ಶಿವಾನಂದ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ.



