ಬಳ್ಳಾರಿ: ಬಳ್ಳಾರಿಯ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದ ಬಾಲಕನ ಮೇಲೆ ಏಕಾಏಕಿ ಮೊಸಳೆ ದಾಳಿ ಮಾಡಿದ್ದು, ಸ್ನೇಹಿತನ ಸಹಾಯದಿಂದ ಯುವಕನ ಪ್ರಾಣ ಉಳಿದ ಘಟನೆ ನಡೆದಿದೆ.
ಸಣಾಪುರ ಗ್ರಾಮದ 16 ವರ್ಷದ ವೇದಮೂರ್ತಿ ಮೇಲೆ ಮೊಸಳೆ ದಾಳಿ ಮಾಡಿದ್ದು, ಮೊಸಳೆ ಬಾಯಿಗೆ ಸಿಕ್ಕಿಕೊಂಡ ಬಾಲಕನನ್ನು ಸ್ಥಳದಲ್ಲೇ ಇದ್ದ ವೀರೇಶ್ ಎಂಬ ಯುವಕ ರಕ್ಷಿಸಿದ್ದಾನೆ.
ಸಮೀಪದಲ್ಲಿದ್ದ ಕಲ್ಲನ್ನು ಮೊಸಳೆ ಮೇಲೆ ಎತ್ತಾಕಿ ಬಾಲಕನನ್ನ ರಕ್ಷಿಸಿದ್ದಾನೆ. ಗಾಯಾಳು ಬಾಲಕನನ್ನು ಕಂಪ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.



