ಚಿಕ್ಕಮಗಳೂರು:– ಕಾರಿನ ಮೇಲೆ ಬೃಹತ್ ಮರ ಬಿದ್ದು ವಾಹನ ಸಂಪೂರ್ಣ ಜಖಂ ಆಗಿರುವ ಘಟನೆ ಇಲ್ಲಿನ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿಯಲ್ಲಿ ಜರುಗಿದೆ. ಫಾಲ್ಸ್‌ಗೆ ಬಂದಿದ್ದ ಪ್ರವಾಸಿಗರ ಕಾರಿನ ಮೇಲೆ ಬೃಹತ್ ಮರ ಬಿದ್ದು ಅವಘಡ ಸಂಭವಿಸಿದೆ.
ಕಾರು ನಿಲ್ಲಿಸಿ ಫಾಲ್ಸ್ ನೋಡಲು ಪ್ರವಾಸಿಗರು, ತೆರಳಿದ್ದಾಗ ಗಾಳಿ ಮಳೆಗೆ ಮರ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.ಕೂಡಲೇ ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



