ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಘನಮೌನಿ, ತ್ರಿಕಾಲ ಜ್ಞಾನಿ, ಮೌನ ತಪಸ್ವಿ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ೩೦ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪೂರ್ವಬಾವಿ ಸಭೆ ಇತ್ತೀಚೆಗೆ ಜರುಗಿತು.
ಸಭೆಯಲ್ಲಿ ಸುಕ್ಷೇತ್ರ ಬಳಗಾನೂರ ಶ್ರೀಮಠದ ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಿದ್ದರು. ಸಭೆಯಲ್ಲಿ ಶ್ರೀಮಠದ ಭಕ್ತರು, ಶರಣರ ಬಳಗದ ಹಿರಿಯರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
2024ರ ಫೆ. 4ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಸಾಮೂಹಿಕ ವಿವಾಹದಲ್ಲಿ ಅಸಕ್ತ ವಧು-ವರರ ಹೆಸರುಗಳನ್ನು ಜನವರಿ 28, 2024ರ ಒಳಗಾಗಿ ನೋಂದಾಯಿಸಲು ಮೊ.ಸಂ.- 8880808822, 9483661263 ಸಂಪರ್ಕಿಸಬಹುದು. ವಿವಾಹಗಳ ದಾಖಲಾತಿಗಾಗಿ ಶ್ರೀಮಠದಲ್ಲಿ ಮಾತ್ರ ವಿವರವಾದ ಮಾಹಿತಿ ಪಡೆಯಬೇಕು ಎಂದು ಸುಕ್ಷೇತ್ರ ಬಳಗಾನೂರ ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.



