ಶಿವಮೊಗ್ಗ : ಈಜಲು ಹೋಗಿದ್ದ ವ್ಯಕ್ತಿ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಆನಂದಪುರ ಬಳಿ ಇರುವ ಚಂಪಕ ಸರಸು ಕಲ್ಯಾಣಿಯಲ್ಲಿ ನಡೆದಿದೆ. ಬೆಂಗಳೂರು ಮೂಲದ ಕುಶಾಲ್ (22) ಮೃತ ದುರ್ಧೈವಿಯಾಗಿದ್ದು,
ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ಇಲ್ಲಿನ ಮಹಂತಿನ ಮಠದಲ್ಲಿರುವ ಚಂಪಕ ಸರಸು ಕಲ್ಯಾಣಿಯನ್ನು ಚಲನಚಿತ್ರ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆಯಿಂದ ಸ್ವಚ್ಚಗೊಳಿಸಲಾಗಿತ್ತು. ಕುಶಾಲ್, ಸಾಯಿರಾಂ ಹಾಗೂ ಯಶವಂತ ಎಂಬ ಯುವಕರು ಕಾರಿನಲ್ಲಿ ಪ್ರವಾಸಕ್ಕೆ ಆಗಮಿಸಿದ್ದು. ಈಜಲು ಹೋಗಿದ್ದಾಗ ಸಾವನ್ನಪ್ಪಿದ್ದಾನೆ. ಇನ್ನೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಲ್ಯಾಣಿಯಿಂದ ಶವ ಮೇಲಕ್ಕೇತ್ತಿದ್ದಾರೆ.



