HomeGadag Newsಬಡತನದಲ್ಲಿ ಅರಳಿದ ಪ್ರತಿಭೆ

ಬಡತನದಲ್ಲಿ ಅರಳಿದ ಪ್ರತಿಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಂದೆ ಇಲ್ಲ, ತಾಯಿ ಇದ್ದರೂ ಚಿಕ್ಕಂದಿನಿಂದಲೇ ತಾತನ ಆಸರೆಯಲ್ಲಿಯೇ ಬೆಳೆದು, ಗುಡಿಸಲಿನಂತಹ ಮನೆಯಲ್ಲಿ ಇದ್ದು ವಾಣಿಜ್ಯ ವಿಭಾಗದಲ್ಲಿ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿ ಶೇ.91 ಅಂಕಗಳನ್ನು ಗಳಿಸುವ ಮೂಲಕ ಪಟ್ಟಣದ ಬಿಸಿಎನ್ ಪಿಯು ಕಾಲೇಜಿನ ಗೌರಮ್ಮ ಹಿತ್ತಲಮನಿ ಸಾಧನೆ ಮಾಡಿರುವದು ಮನೆಯಲ್ಲಿ ಸಂತಸ ಮೂಡಿಸಿದೆ.

ಗೌರಮ್ಮ ಪಟ್ಟಣದ ನಿಂಗಪ್ಪ ಹಿತ್ತಮನಿ ಅವರ ಪುತ್ರಿ. ಕಳೆದ ಒಂದು ವರ್ಷದ ಹಿಂದೆ ತಂದೆ ಸಾವನಪ್ಪಿದರು. ಆದರೆ ಇವಳು ಪುಟ್ಟ ಮಗುವಾಗಿದ್ದಾಗಲೇ ಪಟ್ಟಣದ ಡಿಎಸ್‌ಎಸ್ ಮುಖಂಡ ಸುರೇಶ ನಂದೆಣ್ಣವರ ದಂಪತಿಗಳ ಆಸರೆಯಲ್ಲಿ ಮುದ್ದಿನ ಮೊಮ್ಮಗಳಾಗಿ ಬೆಳೆದವಳು. ಚಿಕ್ಕಂದಿನಿಂದಲೂ ಚುರುಕು ಹಾಗೂ ಬುದ್ಧಿವಂತೆಯಾಗಿರುವ ಇವಳು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಕಲಿತು ಅಲ್ಲಿ ಶೇ.80 ಅಂಕಗಳನ್ನು ಗಳಿಸಿದ್ದಳು. ಪಿಯುಸಿಗೆ ಬಿಸಿಎನ್ ಪದವಿಪೂರ್ವ ಕಾಲೇಜಿಗೆ ಸೇರಿ ಇದೀಗ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದಿ ಶೇ.91 ಅಂಕಗಳನ್ನು ಗಳಿಸಿದ್ದು ಅವಳ ಪ್ರತಿಭೆಗೆ ಸಾಕ್ಷಿಯಾಗಿದೆ.

ವಾಣಿಜ್ಯ ವಿಭಾಗದಲ್ಲಿ ಕನ್ನಡ-96, ಇತಿಹಾಸ-94, ಅರ್ಥಶಾಸ್ತ್ರ-95, ವ್ಯವಹಾರ ಅಧ್ಯಯನ-93, ಇಂಗ್ಲೀಷ್-80 ಮತ್ತು ಲೆಕ್ಕಶಾಸ್ತ್ರದಲ್ಲಿ-84 ಅಂಕಗಳನ್ನು ಗಳಿಸಿದ್ದಾಳೆ. ಮೊಮ್ಮಗಳ ಸಾಧನೆಗೆ ಅಜ್ಜ ಸುರೇಶ ನಂದೆಣ್ಣವರ ಹಾಗೂ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!