ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾಸವನ್ನಪ್ಪಿದ್ದಾನೆ. ಅರುಣ್ ಕುಮಾರ್ ಮೃತ ದುರ್ಧೈವಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.
ಅರುಣ್ ಕುಮಾರ್ ಸ್ನೇಹಿತರೊಂದಿಗೆ ಲಗ್ಗೇರಿಯ ಙ್ಞಾನವರ್ಧಕ ಶಾಲೆಯ ಬಳಿ ಪಾನಿಪುರಿ ತಿನ್ನಲು ಬಂದಿದ್ದ ವೇಳೆ, ಏರಿಯಾದಲ್ಲಿ ನನ್ನದು ಜಾಸ್ತ ಯಾಯ್ತು ಎಂಬ ಆವಾಜ್ ಹಾಕಿ ಶಂಶಾಕ್, ದರ್ಶನ್, ಸಾಗರ್ ಇನ್ನಿತರರಿಂದ ಸೇರಿ ಹಲ್ಲೆ ಮಾಡಿದ್ದಾರೆ.
ದೊಣ್ಣೆ, ಮಾರಕಾಸ್ತ್ರಗಳಿಂದ ಕಣ್ಣು, ಕಿವಿ, ಎದೆ ಭಾಗಕ್ಕೆ ತೀರ್ವವಾಗಿ ಹಲ್ಲೆ ಮಾಡಿದ್ದು, ಇದರಿಂದ ಅರುಣ್ ಕುಮಾರ್ ಗೆ ತೀರ್ವರಕ್ತ ಸ್ರಾವವಾಗಿ ವಿಕ್ಟೋರಿಯಾ ಆಸ್ಪತ್ರೆಯ ಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.



