ಹಾಸನ– ನಗರದ ದೇವರಾಯಪಟ್ಟಣದ ಬಾರ್ ಬಳಿ ಲಾಂಗ್ ನಿಂದ ಕೊಚ್ಚಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜರುಗಿದೆ. ತನ್ನೊಂದಿಗೆ ಕೊಲೆ ಮಾಡಲು ಬರ್ತಿಲ್ಲ ಎಂದು ಯುವಕನ ಮೇಲೆ ಪುಡಿರೌಡಿ ಈ ಕೃತ್ಯ ಎಸಗಿದ್ದಾನೆ. ಪುಡಿರೌಡಿಯ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಜಯ್ ಎಂಬ ಕಿಡಿಗೇಡಿಯಿಂದ ಈ ಕೃತ್ಯ ನಡೆದಿದೆ.
ನಡೆದಿದ್ದೇನು?
ಆರೋಪಿ ವಿಜಯ್, ನಾನು ಒಬ್ಬನನ್ನ ಮುಗಿಸಬೇಕು ನನ್ನೊಟ್ಟಿಗೆ ಬಾ ಎಂದು ಹಲ್ಲೆಗೊಳಗಾದ ಯುವಕನಿಗೆ ಹಿಂಸೆ ಕೊಡ್ತಿದ್ದ. ಆದರೆ ವಿಜಯ್ ಜೊತೆಗೆ ಹೋಗಲು ನಿರಾಕರಿಸಿದ್ದಕ್ಕೆ ಯುವಕ ಸುನಿಲ್ ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಸುನಿಲ್ ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಸಂಬಂಧ ಹಾಸನ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



