ಉಡುಪಿ:- ಹಿಟ್ & ರನ್‌ಗೆ 21 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಕಾಪುವಿನಲ್ಲಿ ಜರುಗಿದೆ.
ಅನೂಶ್ ಭಂಡಾರಿ ( 21) ಮೃತ ಯುವಕ. ಮೃತನನ್ನು ಉಡುಪಿಯ ಸಂತೆಕಟ್ಟೆ ಕಲ್ಯಾಣಪುರದ ನಿವಾಸಿ ಎನ್ನಲಾಗಿದೆ. ಸ್ಕೂಟಿಯಲ್ಲಿ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಅಪಘಾತದ ನಂತರ ಬೇರೆ ವಾಹನಗಳು ಮೃತದೇಹದ ಮೇಲೆ ಹರಿದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಅನೂಶ್ ಆರು ತಿಂಗಳ ಹಿಂದೆ ಉಡುಪಿಗೆ ಬಂದು, ಮಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.



