ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜೀವನ್(30) ವರ್ಷ, ಆಶಾ (30) ಬಂಧಿತ ಆರೋಪಿಗಳಾಗಿದ್ದು, ಕಳೆದ 6 ನೇ ತಾರೀಖು ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಗೆಹಳ್ಳಿ ಮನೆಯಲ್ಲಿ ಬಾಡಿಗೆ ಕೇಳುವ ನೆಪದಲ್ಲಿ ವೃದ್ದ ದಂಪತಿಗಳಿಗೆ ಹಲ್ಲೆ ಮಾಡಿ ವೃದ್ದೆಯ ಮಾಂಗಲ್ಯ ಸರ ಕಿತ್ತು ಪಾರಾರಿಯಾಗಿದ್ದರು.
ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಿದ್ದ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 17 ಲಕ್ಷ ಬೆಲೆಬಾಳುವ 240 ಗ್ರಾಂ ಚಿನ್ನ 90 ಗ್ರಾಂ ವಶಕ್ಕೆ ಪಡೆದಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.



