HomeGadag Newsರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸಾಧನೆ

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸಾಧನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿಯ ಆಸ್ಪರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗದಗ ಜಿಲ್ಲೆಯ ಚೇತನ ಕರಾಟೆ ಕ್ಲಬ್‌ನ ಕ್ರೀಡಾಪಟುಗಳು ಭಾಗವಹಿಸಿ ಪದಕಗಳೊಂದಿಗೆ ವಿಜೇತರಾಗಿ ಉತ್ತಮ ಸಾಧನೆಗೈದಿದ್ದಾರೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ ವಾಸವಿ ಮಹಲ್‌ನಲ್ಲಿ ಹಮ್ಮಿಕೊಂಡ ರಾಷ್ಟçಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ, ಮಹಾರಾಷ್ಟç, ಆಂಧ್ರಪ್ರದೇಶ, ಕಲ್ಕತ್ತಾ ಸೇರಿ ಎಂಟು ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ಗದಗ ಜಿಲ್ಲೆಯ ಚೇತನ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ವೇದಸಾಯಿ ಪೋಪ್ತಿ-ಕಟಾ, ಕುಮಟೆ (ಪ್ರಥಮ),

ಯಜ್ಞಸಾಯಿ ಪೋಪ್ತಿ-ಕಟಾ (ದ್ವಿತೀಯ), ಸಾನ್ವಿ ಪೂಜಾರ-ಕಟಾ (ಪ್ರಥಮ), ಕುಮಟೆ (ತೃತೀಯ), ಅನುಷಾ ಪಾಲನಕರ-ಕಟಾ(ಪ್ರಥಮ), ಕುಮಟೆ (ದ್ವಿತೀಯ), ಕುಶಾಲ ವೇರ್ಣೇಕರ-ಕಟಾ (ದ್ವಿತೀಯ), ಚಿರಂತ ಗೌಡರ-ಕಟಾ (ದ್ವಿತೀಯ), ವಿಜಯ ಗುಡ್ಡಿಮಠ-ಕಟಾ (ದ್ವಿತೀಯ), ಕುಮಟೆ (ಪ್ರಥಮ), ಗಜಾನನ ಎಸ್-ಕಟಾ (ದ್ವಿತೀಯ) ಕುಮಟೆ (ತೃತೀಯ), ಪ್ರಿಯಾಂಕ ನಂದಪ್ಪನವರ-ಕಟಾ (ತೃತೀಯ), ಕುಮಟೆ (ತೃತೀಯ), ಸುಜಿತ ನಂದಪ್ಪನವರ-ಕಟಾ (ದ್ವಿತೀಯ), ಸುಮೀತ ಬಂಕಾಪುರ-ಕಟಾ (ಪ್ರಥಮ), ಕುಮಟೆ ದ್ವಿತೀಯ, ಗಣೇಶ ದೇವರಡ್ಡಿ-ಕಟಾ (ದ್ವಿತೀಯ), ಕುಮಟೆ (ಪ್ರಥಮ), ಮೀನಾಕ್ಷಿ ದೇವರಡ್ಡಿ-ಕಟಾ, ಕುಮಟೆ (ಪ್ರಥಮ), ಚರಂತಗೌಡ-ಕಟಾ, ಕುಮಟೆ (ಪ್ರಥಮ), ಸಮರ್ಥ ಬೆಲ್ಲದ-ಕಟಾ (ಪ್ರಥಮ), ಮಹಮ್ಮದಗೌಸ ಎಲಿಗಾರ-ಕಟಾ (ತೃತೀಯ), ಆಕಾಶ ಸಿಮಿಕೇರಿ-ಕಟಾ, ಕುಮಟೆ (ಪ್ರಥಮ), ಮಿಥುನ ಬಾರಕೇರ-ಕಟಾ (ದ್ವಿತೀಯ), ಕುಮಟೆ (ತೃತೀಯ), ಅನಿರುದ್ಧ ಯಾದವ-ಕಟಾ (ದ್ವಿತೀಯ), ಕುಮಟೆ (ಪ್ರಥಮ), ಅಬುರಿಯನ್ ಹುಲ್ಯಲ್-ಕಟಾ, ಕುಮಟೆ (ತೃತೀಯ), ಸೋಹಿಲ್ ಹಾಲಕೇರಿ-ಕಟಾ (ತೃತೀಯ) ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ತರಬೇತಿ ನೀಡಿದ ಗದಗ ಜಿಲ್ಲೆಯ ಮುಖ್ಯ ತರಬೇತುದಾರರಾದ ಪರಶುರಾಮ ಹಬೀಬ ಹಾಗೂ ಪಾಲಕರು ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಚೇತನ ಕರಾಟೆ ಕ್ಲಬ್‌ನ ತರಬೇತುದಾರಾದ ಚೇತನ ಹಬೀಬ, ಶಿವರಾಜ ಗಾಡದ, ಗಂಗಪ್ಪ ಸಾಸ್ವಿಹಳ್ಳಿ, ದ್ಯಾಮಪ್ಪ ಹಾವೇರಿ, ಜ್ಯೋತಿಕಾ ಕುರಗೋಡ, ಖುಷಿ ವೇರ್ಣೇಕರ ಇವರುಗಳನ್ನು ಅಭಿನಂದಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!