ಮೈಸೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ದರ್ಶನ್ ಆರು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲೇ ಕಳೆದಿದ್ದಾರೆ. ಜೈಲಿನಲ್ಲಿದ್ದಾಗ ವಿಪರೀತ ಬೆನ್ನು ನೋವು ಸಮಸ್ಯೆ ಎದುರಿಸಿದ ದರ್ಶನ್, ಅದನ್ನೇ ಕಾರಣವಾಗಿ ನೀಡಿ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಸಹ ಪಡೆದಿದ್ದರು.
ಆ ಬಳಿಕ ಹೈಕೋರ್ಟ್ನಲ್ಲಿ ಅವರಿಗೆ ನಿಯಮಿತ ಜಾಮೀನು ಸಹ ದೊರೆಯಿತು. ಜಾಮೀನು ದೊರೆತ ಬಳಿಕ ಕೆಲ ವಾರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದ ದರ್ಶನ್ ನಿಧಾನಕ್ಕೆ ಮತ್ತೆ ಸಾರ್ವಜನಿಕ ಜೀವನದತ್ತ ಮರಳುತ್ತಿರುವಂತೆ ತೋರುತ್ತಿದೆ.
ಇದೀಗ ನಟ ದರ್ಶನ್ ಕುಟುಂಬಸ್ಥರ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದಿಂದ ಆಚರಿಸಿದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತರ ಜೊತೆ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಭೇಟಿ ನೀಡಿದ್ದಾರೆ.
ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದೇವಸ್ಥಾನದಲ್ಲಿ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಸದ್ಯ ದರ್ಶನ್ ಎಂದಿನಂತೆ ಈ ವರ್ಷವೂ ಕೂಡ ಜ.14ರಂದು ಸಂಕ್ರಾಂತಿ ಹಬ್ಬ ಸೆಲೆಬ್ರೇಟ್ ಮಾಡಿ ಸಂಭ್ರಮಿಸಿದ್ದಾರೆ. ಫಾರಂ ಹೌಸ್‌ನಲ್ಲಿ ಸಹೋದರ ದಿನಕರ್, ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೊತೆ ನಟ ಹಬ್ಬ ಆಚರಿಸಿದ್ದಾರೆ.



