HomeEntertainmentರಜನಿಕಾಂತ್ ಜೊತೆ ನಟಿ ಪೂಜಾ ಹೆಗ್ಡೆ ಐಟಂ ಡ್ಯಾನ್ಸ್..! ಸಂಭಾವನೆ ಎಷ್ಟು ಗೊತ್ತಾ..?

ರಜನಿಕಾಂತ್ ಜೊತೆ ನಟಿ ಪೂಜಾ ಹೆಗ್ಡೆ ಐಟಂ ಡ್ಯಾನ್ಸ್..! ಸಂಭಾವನೆ ಎಷ್ಟು ಗೊತ್ತಾ..?

For Dai;y Updates Join Our whatsapp Group

Spread the love

ಪೂಜಾ ಹೆಗ್ಡೆ ಟಾಲಿವುಡ್‌ನ ಪ್ರಮುಖ ನಟಿ. ನಾಗ ಚೈತನ್ಯ ಅಭಿನಯದ “ಒಕ್ಕ ಲೈಲಾ ಪಾರೋ” ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಇನ್ನೂ ಇದರ ನಡುವೆ ಪೂಜಾ ಹೆಗ್ಡೆ ಕೂಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಚಿತ್ರದ ಅಧಿಕೃತ ನಿರ್ಮಾಪಕರಾದ ಸನ್ ಪಿಕ್ಚರ್ಸ್ ಅಧಿಕೃತವಾಗಿ ಪೂಜಾ ಹೆಗ್ಡೆ ಫೋಟೋ ಹಂಚಿಕೊಂಡಿದ್ದು, ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್, ನಮ್ಮ ರಿಯಲ್ ಸ್ಟಾರ್ ಉಪೇಂದ್ರ, ಕಿಂಗ್ ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಕೂಲಿ ಅಡ್ಡಾದಲ್ಲಿ ಬಿಗ್ ಸ್ಟಾರ್‌ಗಳ ದಂಡೇ ಇದೆ. ಇಂತಹಃ ಮಲ್ಟಿಸ್ಟಾರರ್ ಮೂವಿಗೆ ಈಗ ಪೂಜಾ ಎಂಟ್ರಿ ಕೊಟ್ಟಿದ್ದಾರೆ.

ಲೋಕೇಶ್ ಕನಗರಾಜ್ ಅವರು ‘ಕೂಲಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಜನಿಕಾಂತ್ ಅವರು ಹೀರೋ ಆಗಿದ್ದಾರೆ. ಈ ಮೊದಲು ‘ಜೈಲರ್’ ಸಿನಿಮಾದಲ್ಲಿ ರಜನಿ ಹಾಗೂ ತಮನ್ನಾ ಕಾಣಿಸಿಕೊಂಡಿದ್ದ ವಿಶೇಷ ಸಾಂಗ್ ಹಿಟ್ ಆಯಿತು. ಈ ಕಾರಣಕ್ಕೆ ಹೊಸ ಸಿನಿಮಾದಲ್ಲೂ ಐಟಂ ಸಾಂಗ್ ಇಡಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಲೋಕೇಶ್ ಕನಗರಾಜ್ ಅವರು ಪೂಜಾ ಹೆಗ್ಡೆಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ.

ರಜನಿಕಾಂತ್ ಜೊತೆ ಪೂಜಾ ಹೆಗ್ಡೆ ಹೆಜ್ಜೆ ಹಾಕಲು ಬರೋಬ್ಬರಿ 2 ಕೋಟಿ ರೂಪಾಯಿ ಕೇಳಿದ್ದಾರೆ. ಇದನ್ನು ಕೊಡಲು ನಿರ್ಮಾಪಕರು ಒಪ್ಪಿದ್ದಾರೆ. ತಮನ್ನಾ ಹಾಗೂ ರಜನಿಕಾಂತ್ ಕಾಣಿಸಿಕೊಂಡ ಸಾಂಗ್ ಸೂಪರ್ ಹಿಟ್ ಆಗಿತ್ತು. ಪೂಜಾ ಹೆಗ್ಡೆ ನಟಿಸೋ ಸಾಂಗ್ ಕೂಡ ಹಿಟ್ ಆಗಬಹುದು ಎಂಬುದು ನಿರ್ಮಾಪಕರ ಊಹೆ. ಹೀಗಾಗಿ, ದೊಡ್ಡ ಮೊತ್ತದಲ್ಲಿ ಹಣ ನೀಡಲು ಅವರು ಒಪ್ಪಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!