HomeGadag Newsಮಹರ್ಷಿ ವೇದವ್ಯಾಸರ ಕುರಿತು ಪಠ್ಯದಲ್ಲಿ ಸೇರಿಸಿ

ಮಹರ್ಷಿ ವೇದವ್ಯಾಸರ ಕುರಿತು ಪಠ್ಯದಲ್ಲಿ ಸೇರಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಹರ್ಷಿ ವೇದವ್ಯಾಸರ ಕುರಿತು ಶೈಕ್ಷಣಿಕ ಪಠ್ಯದಲ್ಲಿ ಸೇರಿಸಬೇಕು ಮತ್ತು ರಾಜ್ಯ ಸರ್ಕಾರದಿಂದ ಜಯಂತಿ ಆಚರಿಸಬೇಕೆಂದು ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ನ ಜಿಲ್ಲಾ ಅಧ್ಯಕ್ಷ ಜೆ.ಬಿ. ಗಾರವಾಡ ಆಗ್ರಹಿಸಿದರು.

ಗದಗ ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಮತ್ತು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿರು.

ಶ್ರೀ ವೇದವ್ಯಾಸರ ಜೀವನ ಸಂದೇಶ ಕುರಿತು ಗದಗ ತಾಲೂಕಾಧ್ಯಕ್ಷ ಡಾ.ಗಣೇಶ ಸುಲ್ತಾನಪುರ ಉಪನ್ಯಾಸ ನೀಡಿದರು. ಟ್ರಸ್ಟ್ನ ನಿರ್ದೇಶಕ ಮಂಜುನಾಥ ಕುಪ್ಪಣ್ಣ ಸುಣಗಾರ ಮಾತನಾಡಿದರು.

ಸಮಾರಂಭದಲ್ಲಿ ಓಣಿಯ ಹಿರಿಯರಾದ ಉಮೇಶ ಪೂಜಾರ, ಕೆ.ಎನ್. ಸುಣಗಾರ, ಚಂದ್ರಶೇಖರ ಪೂಜಾರ, ಪ್ರಕಾಶ ಪೂಜಾರ, ಉಡಚಪ್ಪ ಬಾರಕೇರ, ಮಾರುತಿ ಪೂಜಾರ, ಶ್ರೀಕಾಂತ ಪೂಜಾರ, ಗೋಪಾಲ ಲಕ್ಷ್ಮೇಶ್ವರ, ರವಿಕುಮಾರ ಸವಣೂರ, ಶ್ರೀಧರ ಸುಣಗಾರ, ರಾಜು ಬಾರಕೇರ, ಕಿರಣಕುಮಾರ ಪೂಜಾರ, ಅರ್ಜುನ ಪೂಜಾರ, ಚಾಮರಾಜ ಪೂಜಾರ, ಬಸವರಾಜ ಜಗಳೂರ, ಹನಮಂತ ಮಾನ್ವಿ, ಕೃಷ್ಣಾ ಬಾರಕೇರ, ವಿನೋದ ಜಕನೂರ, ಸುನೀಲ ಮಾನ್ವಿ, ಮಹೇಶ ಪೂಜಾರ, ಪಾರವ್ವ ಪೂಜಾರ, ಶಂಕರವ್ವ ಪೂಜಾರ, ಮಹಾಲಕ್ಷ್ಮೀ ಮಠಪತಿ, ರತ್ನಾ ಲಕ್ಷ್ಮೇಶ್ವರ, ಗೀತಾ ಪೂಜಾರ, ಲಕ್ಷ್ಮೀ ಲಕ್ಷ್ಮೇಶ್ವರ, ಚನ್ನಮ್ಮ ಪೂಜಾರ, ಶೋಭಾ ಬಾರಕೇರ, ಲಲಿತಾ ಲಕ್ಷ್ಮೇಶ್ವರ, ಮಂಗಲಾ ಲಕ್ಷ್ಮೇಶ್ವರ, ದ್ಯಾಮವ್ವ ಲಕ್ಷ್ಮೇಶ್ವರ, ಅನಸೂಯಾ ಯತ್ನಟ್ಟಿ, ಕಮಲವ್ವ ಪೂಜಾರ, ಸವಿತಾ ಬಾರಕೇರ, ಅನ್ನಪೂರ್ಣ ಸವಣೂರ ಮುಂತಾದವರಿದ್ದರು. ಮಂಜುನಾಥ ಸುಣಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಮ್ಮ ಸಮಾಜದ ಕುಲಗುರು ವೇದವ್ಯಾಸರು ಜಗತ್ತಿಗೆ ಜ್ಞಾನವನ್ನು ನೀಡಿ ವೇದಗಳ ಕಾಲದಿಂದಲೂ ಅತ್ಯಂತ ಪ್ರಸಿದ್ಧರು. ಮಹಾಭಾರತದ ರಚಿಸಿದ ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಸರಳಗೊಳಿಸಿದರು. ಇಂತಹ ಹಲವಾರು ಮಹನೀಯರು ನಮ್ಮ ಸಮಾಜದಲ್ಲಿ ಆಗಿ ಹೋಗಿದ್ದು, ಈಗಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಗದಗ ನಗರದಲ್ಲಿ ಸಮಾಜದಿಂದ ಅಂಬಿಗರ ಚೌಡಯ್ಯ ಭವನ ನಿರ್ಮಾಣ ಭರದಿಂದ ಸಾಗುತ್ತಿದೆ. ಸಾರ್ವಜನಿಕರು ತಮ್ಮ ದೇಣಿಗೆಯನ್ನು ನೀಡಬಹುದು ಎಂದು ಜೆ.ಬಿ. ಗಾರವಾಡ ಮನವಿ ಮಾಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!