HomeKarnataka Newsಎಐಸಿಸಿ ಅಧ್ಯಕ್ಷರೇ ನೀವು ಇನ್ನೂ ಗುಲಾಮಗಿರಿ ಮಾಡ್ತಿದ್ದೀರಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಎಐಸಿಸಿ ಅಧ್ಯಕ್ಷರೇ ನೀವು ಇನ್ನೂ ಗುಲಾಮಗಿರಿ ಮಾಡ್ತಿದ್ದೀರಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

For Dai;y Updates Join Our whatsapp Group

Spread the love

ಬೆಂಗಳೂರು: ಎಐಸಿಸಿ ಅಧ್ಯಕ್ಷರೇ ನೀವು ಇನ್ನೂ ಗುಲಾಮಗಿರಿ ಮಾಡ್ತಿದ್ದೀರಿ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಮಾಡುವ ಯೋಗ್ಯತೆ ಇಲ್ಲ. ಮಾಡುವಂತ ಮೋಸಕ್ಕೆ ಜನರು ನಿಮಗೆ ಬುದ್ಧಿ ಕಲಿಸ್ತಾರೆ. ಅಂಬೇಡ್ಕರ್ಗೆ ಗೌರವ ಸಿಕ್ಕಿದ್ದು ಬಿಜೆಪಿಯವರಿಂದ,

ಅವರು ಸತ್ತಾಗ ಆರಡಿ ಮೂರಡಿ ಜಾಗವನ್ನು ಕೊಟ್ಟಿಲ್ಲ. ಕಾಂಗ್ರೆಸ್ನವರು ಸತ್ತಾಗ ನೂರಾರು ಎಕ್ರೆ ಜಾಗ ಕೊಟ್ಟಿದ್ದೀರಾ. ದೇಶದ ದಲಿತರ ಅಗ್ರಗಣ್ಯ ನಾಯಕರಂತೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ರಬ್ಬರ್ ಸ್ಟ್ಯಾಂಪ್ ಆಗಿ ಕೂತಿದ್ದೀರಿ. ಎಐಸಿಸಿ ಅಧ್ಯಕ್ಷರೇ ನೀವು ಇನ್ನೂ ಗುಲಾಮಗಿರಿ ಮಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಕೆಪಿಎಸ್ಸಿ ಪರೀಕ್ಷಾರ್ಥಿಗಳು ಮಧ್ಯರಾತ್ರಿ 12 ಗಂಟೆವರೆಗೆ ಬಂದು ಅಡ್ಮಿಷನ್ ಟಿಕೆಟ್ ತಗೊಳ್ಳಿ ಎಂದು ಎಲ್.ಕೆ.ಅತೀಕ್ ಸಭೆಯಲ್ಲಿ ಹೇಳಿದ್ದಾರಂತೆ. ಕೆಪಿಎಸ್ಸಿಗೂ ಅತೀಕ್ ಅವರಿಗೂ ಏನು ಸಂಬಂಧ? ಅತೀಕ್ ಎಲ್ಲರದರಲ್ಲೂ ಮೂಗು ತೂರಿಸ್ತಾರೆ ಅಂತ ಅಧಿಕಾರಿಗಳೇ ಹೇಳ್ತಾರೆ. ಸಿಎಂಗೆ ಅತೀಕ್ ಮೇಲೆ ಬಹಳ ಪ್ರೀತಿ. ಅತೀಕ್ ಅವರಿಗೇ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟುಬಿಡಿ. ಆಗ ಎಲ್ಲದರಲ್ಲೂ ಅವರು ಮೂಗು ತೂರಿಸೋದು ನಿಲ್ಲುತ್ತದೆ ಎಂದು ಹೇಳಿದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!