ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ನಾಲ್ಕು ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಆರತಿ ಚವ್ಹಾಣ್(32) ಸಾವನ್ನಪ್ಪಿದ್ದು, ನಿನ್ನೆ ಬೆಳಗ್ಗೆ ಹೊಟ್ಟೆ ನೋವು ಅಂತಾ ಗೊಂದಳಿ ಗಲ್ಲಿಯ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದರು. ಇಪ್ಪತ್ತೈದು ಸಾವಿರ ಹಣ ಕಟ್ಟಿಸಿಕೊಂಡು ಬೆಳಗ್ಗೆ 11ಗಂಟೆಗೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು.
ಈ ವೇಳೆ ನಾಲ್ಕು ತಿಂಗಳ ಶಿಶು ಇದೆ ಅಂತಾ ಒಂದು ಬಾರಿ, ಸ್ವಲ್ಪ ಹೊತ್ತಿನ ಬಳಿಕ ಆರು ತಿಂಗಳ ಕೂಸಿತ್ತು ಅಂತಾ ಹೇಳಿದ್ದಾರೆ. ಆಪರೇಷನ್ ಬಳಿಕ ಹೊಟ್ಟೆ ನೋವು ಹೆಚ್ಚಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದೇ ನರ್ಸ್ ಗಳಿಂದ ಚಿಕಿತ್ಸೆ ನೀಡಿಲಾಗಿತ್ತು. ಸಂಜೆ ಐದು ಗಂಟೆಗೆ ವೈದ್ಯ ಬಂದು ನೋಡಿದಾಗ ಬಿಪಿ ಲೋ.ರೋಗಿ ಉಳಿಯಲ್ಲಾ ಅಂದುಕೊಂಡು ತರಾತುರಿಯಲ್ಲಿ ಕೆಎಲ್ಇ ಆಸ್ಪತ್ರೆಗೆ ರವಾನೆ ಮಾಡಿದ್ದರು.
ಕೆಎಲ್ಇ ಆಸ್ಪತ್ರೆಗೆ ಶಿಪ್ಟ್ ಮಾಡುವಾಗ ಮಾರ್ಗ ಮಧ್ಯದಲ್ಲಿ ಆರತಿ ಮೃತಪಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ರೋಗಿ ನರಳಿದ್ರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಆಸ್ಪತ್ರೆ, ವೈದ್ಯರ ವಿರುದ್ಧ ಆರತಿ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.



