ಬೆಂಗಳೂರು:-ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಪ್ರತಿಷ್ಟಿತ ಸಾಫ್ಟ್‌ವೇರ್ ವಿಪ್ರೋ ಕಂಪನಿಯ ಉದ್ಯೋಗಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
22 ವರ್ಷದ ಯಾಗ್ನಿಕ್ ಮೃತ ದುರ್ದೈವಿ. ಆಗಸ್ಟ್ 16 ರಂದು ಹೋಟೆಲ್ ನಲ್ಲಿ ಯಾಗ್ನಿಕ್ ರೂಂ ಬಾಡಿಗೆಗೆ ಪಡೆದಿದ್ದು, ಬಲೂನ್ ತುಂಬಲು ಬಳಸುವ ಇಲಿಯಂ ಗ್ಯಾಸ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ಯಾಸ್ ಸಿಲಿಂಡರ್ ತಂದು ಬೃಹದಾಕಾರದ ಕವರ್ ನಿಂದ ಇಡೀ ದೇಹಕ್ಕೆ ಸುತ್ತಿಕೊಂಡು ಗ್ಯಾಸ್ ಪೈಪ್ ಬಾಯೊಳಗೆ ಹಾಕಿ ಗ್ಯಾಸ್ ಆನ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



