HomeEntertainmentನಟ ವಿಷ್ಣುವರ್ಧನ್ ​ಗೆ ‘ಕರ್ನಾಟಕ ರತ್ನ’ ನೀಡುವಂತೆ ಅನಿರುದ್ಧ್ ಜತ್ಕರ್ ಮನವಿ

ನಟ ವಿಷ್ಣುವರ್ಧನ್ ​ಗೆ ‘ಕರ್ನಾಟಕ ರತ್ನ’ ನೀಡುವಂತೆ ಅನಿರುದ್ಧ್ ಜತ್ಕರ್ ಮನವಿ

For Dai;y Updates Join Our whatsapp Group

Spread the love

ಸಾಹಸಸಿಂಹ ನಟ ಡಾ. ವಿಷ್ಣುವರ್ಧನ್ ಅವರು ನಿಧನರಾಗಿ 15 ವರ್ಷಗಳು ಕಳೆದಿವೆ. ಇದೀಗ ಅವರ ಅಳಿನ ನಟ ಅನಿರುದ್ಧ್‌ ಜತ್ಕರ್‌ ಸಿಎಂ ಬಳಿ ಮನವಿ ಮಾಡಿದ್ದು ವಿಷ್ಣುವರ್ಧನ್ ಅವರ ಸಿನಿಮಾ ಸೇವೆ ಪರಿಸಿಗಣಿಸಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದಾರೆ.

ನಾನು ಈ ಪತ್ರವನ್ನು ಸಾಹಸಸಿಂಹ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಕನ್ನಡಿಗರ ಹೃದಯಸಿಂಹಾಸನದಲ್ಲಿ ಸದಾ ಸ್ಥಾನ ಪಡೆದ ದಿಗ್ಗಜ ನಟರಾದ ಡಾ. ವಿಷ್ಣುವರ್ಧನ್ ಅವರ ಕೋಟ್ಯಾಂತರ ಅಭಿಮಾನಿಗಳ ಪರವಾಗಿ, ಗೌರವದೊಂದಿಗೆ ಹಾಗೂ ಹೃದಯಪೂರ್ವಕ ಮನವಿಯೊಂದಿಗೆ ಬರೆಯುತ್ತಿದ್ದೇನೆ.

‘ಕನ್ನಡ ಚಲನಚಿತ್ರರಂಗಕ್ಕೂ ಮತ್ತು ನಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ವಿಷ್ಣುವರ್ಧನ್ ಅವರು ನೀಡಿರುವ ಕೊಡುಗೆ ಅಪರೂಪ ಹಾಗೂ ಅಪಾರ. ಅವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿದ ರೀತಿ ಕೂಡ ಅನೇಕರಿಗೆ ಪ್ರೇರಣೆ. ಅವರು ನಾಯಕನಟನಾಗಿ 225ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.’

‘ಅವರು ನಮ್ಮನ್ನು ಭೌತಿಕವಾಗಿ ಅಗಲಿ 15 ವರ್ಷಗಳು ದಾಟಿದರೂ, ಜನರ ಹೃದಯದಲ್ಲಿ ಅವರು ಹೊಂದಿರುವ ಸ್ಥಾನ ಮಾತ್ರ ಅಚಲವಾಗಿದೆ. ಆದರೆ, ಇದುವರೆಗೆ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿಲ್ಲ. ನಮ್ಮ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯೂ ಇವರಿಗೆ ಕನಿಷ್ಟ ಪಕ್ಷ ಮರಣೋತ್ತರವಾಗಿ ಆದರೂ ಇನ್ನೂ ಲಭಿಸಿಲ್ಲ ಎಂಬುದು ವಿಷಾದನೀಯ.’

‘ಈ ವರ್ಷದ ಸೆಪ್ಟೆಂಬರ್ 18ರಂದು ಅವರ 75ನೇ ಜನ್ಮವಾರ್ಷಿಕೋತ್ಸವವಿದೆ. ಈ ವಿಶೇಷ ಸಂದರ್ಭದಲ್ಲಿ, ಅವರ ಅಪಾರ ಸಾಧನೆಗಳನ್ನು ಗೌರವಿಸಿ, ಅಭಿಮಾನಿಗಳ ಹಿತೈಷಿಗಳ ಇಚ್ಛೆ ಈಡೇರಿಸುವಂತೆ, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕೆಂಬ ಮನವಿ ಇದಾಗಿದೆ. ನಮ್ಮವರನ್ನು ಗೌರವಿಸುವುದು ಅಂದರೆ ನಮ್ಮ ಗುರುತನ್ನು, ಬೇರುಗಳನ್ನು ಮತ್ತು ಬುನಾದಿಯನ್ನು ಗೌರವಿಸುವುದು. ಅವರ ಸಾಧನೆಗಳನ್ನು ನಾವು ಸ್ಮರಿಸಿದರೆ, ಅದು ನಾವು ನಮನ್ನೇ ಗೌರವಿಸುವಂತಾಗುತ್ತದೆ. ಈ ಕನಸು ನನಸಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಮನವಿಗೆ ಗೌರವಯುತವಾದ ಸ್ಪಂದನೆ ಲಭಿಸುವ ನಿರೀಕ್ಷೆಯೊಂದಿಗೆ, ಧನ್ಯವಾದಗಳೊಂದಿಗೆ, ಅನಿರುದ್ಧ್ ಜತಕರ’ ಎಂದು ಬರೆದಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!