HomeGadag Newsಇಡಗುಂಜಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ

ಇಡಗುಂಜಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಇಡಗುಂಜಿ ಗಣಪತಿ ದೇವಸ್ಥಾನದ 17ನೇ ವಾರ್ಷಿಕೋತ್ಸವದ ನಿಮಿತ್ತ ಮಹಾತ್ಮ ಗಾಂಧೀಜಿ ಗಾರ್ಡನ್‌ನಲ್ಲಿನ ಗಣಪತಿ ಹವನ ಕಾರ್ಯಕ್ರಮಗಳು ಓಂಕಾರ ಭಟ್ಟರ ನೇತೃತ್ವದಲ್ಲಿ ಜರುಗಿತು.

ಸಂಜೆ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಲ್ಲಿ ಒಂದು ಲಕ್ಷ ಸಸಿ ನೆಟ್ಟು ದಾಖಲೆ ನಿರ್ಮಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪಡೆದ ಅರಣ್ಯಾಧಿಕಾರಿ ಜಯರಾಮ ಮತ್ತು ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೈದಿರುವ ಆನಂದಸಿಂಗ ದೊಡ್ಡಮನಿ ಅವರನ್ನು ಕಣವಿ ಕೃಷ್ಣಾ ಪ್ಲಾಟ್ ಹಿತರಕ್ಷಣಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಗಣಪತಿ ದೇವಸ್ಥಾನದ ನಿತ್ಯ ಸೇವೆ ಸಲ್ಲಿಸುತ್ತಿರುವ ಅಮೃತ ಧಾರವಾಡಕರ ದಂಪತಿಗಳನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದ ಅತಿಥಿಗಳಾಗಿ ನಾಗರತ್ನ ಶಿವಪ್ಪ ಮುಳಗುಂದ, ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ವೆರ್ಣೇಕರ, ಸಮಿತಿಯ ಕಾರ್ಯದರ್ಶಿ ಆರ್.ಜಿ. ಅರಮನಿ, ಎಸ್.ಎ. ಜಮಾದಾರ, ವೀರನಗೌಡ ಮರಿಗೌಡರ ಪಾಲ್ಗೊಂಡಿದ್ದರು.

ಪ್ರಾರಂಭದಲ್ಲಿ ಶ್ರೀಮತಿ ಅರಮನಿ, ಹೆರಕಲ್ ಪ್ರಾರ್ಥಿಸಿದರು. ಜಿ.ಎಫ್. ಹೆರಕಲ್ ಸ್ವಾಗತಿಸಿದರು. ಬಿ.ವಾಯ್. ಹುಡೇದಮನಿ ಪರಿಚಯಿಸಿದರು. ಎಸ್.ಬಿ. ಪೂಜಾರರು ಕಾರ್ಯಕ್ರಮ ನಿರೂಪಿಸಿದರು. ರಾಜ ಕಪಟಕರ ವಂದಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!