HomeLife Styleಬಿಸಿಲಿಗೆ ಎಸಿ ಮೊರೆ ಹೋಗ್ತಿದ್ದೀರಾ!? ಹಾಗಿದ್ರೆ ಜೊತೆಗೆ ಬರೋ ರೋಗಗಳ ಬಗ್ಗೆ ಇರಲಿ ಅರಿವು!

ಬಿಸಿಲಿಗೆ ಎಸಿ ಮೊರೆ ಹೋಗ್ತಿದ್ದೀರಾ!? ಹಾಗಿದ್ರೆ ಜೊತೆಗೆ ಬರೋ ರೋಗಗಳ ಬಗ್ಗೆ ಇರಲಿ ಅರಿವು!

For Dai;y Updates Join Our whatsapp Group

Spread the love

ಬೇಸಿಗೆ ಪ್ರಾರಂಭವಾಗಿದೆ ಮತ್ತು ಹೆಚ್ಚುತ್ತಿರುವ ತಾಪಮಾನವು ಈಗಾಗಲೇ ಜನರನ್ನು ಬೆವರುವಂತೆ ಮಾಡುತ್ತಿದೆ. ಬೇಸಿಗೆಯಲ್ಲಿ, ಜನರು ಶಾಖವನ್ನು ತಪ್ಪಿಸಲು ಮತ್ತು ತಮ್ಮ ಮನೆಗಳು ಮತ್ತು ಆಫೀಸ್‌ಗಳನ್ನು ತಂಪಾಗಿಡಲು ಕೂಲರ್-ಎಸಿಯನ್ನು ಬಳಸುತ್ತಾರೆ. ಇದರಿಂದ ತ್ವರಿತವಾಗಿ ಬಿಸಿಲಿನ ಉರಿಯಿಂದ ರಕ್ಷಣೆ ಪಡೆಯಬಹುದು.

ಇನ್ನೂ ತಂಪಾದ ಗಾಳಿಯೊಂದಿಗೆ, ಸದಾ ಕೂಲ್​ ಕೂಲಾಗಿರುತ್ತಿದ್ದ ಸಿಟಿ ಮಂದಿ, ಬೇಸಿಗೆ ಬಿಸಿಗೆ ಅಕ್ಷರಶಃ ನರಕ ದರ್ಶನ ಮಾಡಿಸ್ತಿದೆ. ಹೀಗಾಗಿ ಏನಾದ್ರು ಆಗ್ಲಿ ನೆಮ್ಮದಿಯಾಗಿ ಇರೋದಕ್ಕೆ ಒಂದ್​ ಎಸಿ ಇದ್ರೆ ಸಾಕು ಅಂತಿದ್ದಾರೆ. ಎಸಿಯಿಂದಲೂ ದೇಹಕ್ಕೆ ಹಾನಿ ಅನ್ನೋ ವಿಚಾರ ರಿವೀಲ್ ಆಗಿದೆ. ಅದ್ರಲ್ಲೂ ಎಸಿ ಮೊರೆ ಹೋದ್ರೆ ಕಣ್ಣಿನ ಕಾಯಿಲೆ ಕಾಡುತ್ತಂತೆ.

ಇನ್ನು, ಎಸಿ ನಮ್ಮ ದೇಹಕ್ಕೆ ತಂಪು ಕೊಡುತ್ತದೆ. ಆದರೆ ಕಣ್ಣಿನಲ್ಲಿರುವ ತೇವವನ್ನು ನಾಶ ಮಾಡುತ್ತದೆ. ಕಣ್ಣಿನ ತೇವ ಹೋದಾಗ ಬರಗಾಲ ಪೀಡಿತ ದೇಶದಲ್ಲಿ ಭೂಮಿ ಹೇಗೆ ಆಗಿರುತ್ತದೆ, ಹಾಗೇ ಕಣ್ಣಲ್ಲಿ ಅದೇ ತರಹ ಕಣಿಸುತ್ತದೆ. ಇದು ಕಣ್ಣಿನ ಸಮಸ್ಯೆಗೆ ಕಾರಣ ಆಗುತ್ತದೆ.

ಎಸಿ ಬಳಕೆಯಿಂದ ಕಣ್ಣು ಕೆಂಪಾಗಾಗೋದು, ಕಣ್ಣಲ್ಲಿ ಉರಿ ಉರಿ ಉಂಟಾಗುವ ಸಮಸ್ಯೆ ಕಾಡ್ತಿರೋದು ವೈದ್ಯರ ಗಮನಕ್ಕೆ ಬಂದಿದೆ. ಪ್ರತಿ ಬೇಸಿಗೆಯಲ್ಲಿ ಈ ತರಹದ ಕಾಯಿಲೆಗಳು ಬರೋದು ಸಹಜ. ಆದ್ರೆ, ಈ ಬಾರಿ ಕಳೆದ ವರ್ಷಕ್ಕಿಂತ 100 ಪಟ್ಟು ಹೆಚ್ಚಾಗಿರೋದು ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಎಸಿ ಬಳಕೆಯಿಂದ ಕನ್ನಡಕ ಬಳಸೋರ ಕನ್ನಡಕದ ಪವರ್ ಚೇಂಜ್ ಆಗುವ ಜೊತೆ ಕಣ್ಣಿನ ಪೊರೆಯತ್ತ ಪಿಂಪಲ್ಸ್ ಕೂಡ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ.

ಸೋಮಾರಿತನ:-

ಎಸಿಯನ್ನು ಬಳಸುವಾಗ, ಕಿಟಕಿಗಳು ಮತ್ತು ಬಾಗಿಲುಗಳನ್ನು ಸಾಮಾನ್ಯವಾಗಿ ಮುಚ್ಚಲಾಗುತ್ತದೆ, ಇದರಿಂದಾಗಿ ತಾಜಾ ಗಾಳಿ ಸಿಗುವುದಿಲ್ಲ ಮತ್ತು ದೀರ್ಘಕಾಲದವರೆಗೆ ತಾಜಾ ಗಾಳಿಗೆ ಒಡ್ಡಿಕೊಳ್ಳದಿದ್ದರೆ ಆಲಸ್ಯ ಮತ್ತು ದಣಿವು ಹೆಚ್ಚಾಗಿ ಕಾಡುತ್ತೆ.

ಅಲರ್ಜಿ ಮತ್ತು ಅಸ್ತಮಾ:-

ನೀವು ಈಗಾಗಲೇ ಅಲರ್ಜಿ ಅಥವಾ ಅಸ್ತಮಾದಿಂದ ಬಳಲುತ್ತಿದ್ದರೆ, ಎಸಿಯಿಂದಾಗಿ ನಿಮ್ಮ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಕೋಣೆಯಲ್ಲಿ ಏರ್ ಕಂಡೀಷನರ್ ಇದ್ದರೆ, ಸುತ್ತಲೂ ಶುದ್ಧ ಗಾಳಿ ಸಿಗದಿರೋದರಿಂದ ಅಲರ್ಜಿ, ಅಸ್ತಮಾ ಹೆಚ್ಚುವ ಸಾಧ್ಯತೆ ಇದೆ.

ಒಣ ಅಥವಾ ತುರಿಕೆ ಚರ್ಮ:-

ನೀವು ಹವಾನಿಯಂತ್ರಿತ ಸ್ಥಳದಲ್ಲಿ ದೀರ್ಘಕಾಲ ಉಳಿದು ನಂತರ ಬಿಸಿಲಿನಲ್ಲಿ ಹೊರಗೆ ಹೋದರೆ, ಅದು ನಿಮ್ಮ ಚರ್ಮವನ್ನು ಬೇಗ ಒಣಗಿಸುತ್ತದೆ, ಇದು ತುರಿಕೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸ್ಕಿನ್ ಡ್ರೈ ಆಗುತ್ತೆ.

ಉಸಿರಾಟದ ತೊಂದರೆಗಳು:
ಹವಾನಿಯಂತ್ರಿತ ಸ್ಥಳದಲ್ಲಿ ದೀರ್ಘಕಾಲ ಉಳಿಯುವುದರಿಂದ ನಿಮಗೆ ಉಸಿರಾಟದ ತೊಂದರೆಗಳೂ ಉಂಟಾಗಬಹುದು. ವಾಸ್ತವವಾಗಿ, ಎಸಿ ಆನ್ ಮಾಡಿದ್ರೆ, ಅಲ್ಲಿನ ಕಿಟಕಿಗಳು ಮತ್ತು ಬಾಗಿಲುಗಳು ಮುಚ್ಚಲೇಬೇಕಾಗುತ್ತೆ, ಇದರಿಂದಾಗಿ ತಾಜಾ ಗಾಳಿ ಲಭ್ಯವಾಗೋದಿಲ್ಲ. ಇದರಿಂದಾಗಿ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತವೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!