HomeGadag Newsದೂದಪೀರಾಂ ದರ್ಗಾ ಅಭಿವೃದ್ಧಿಗೆ ನೆರವು

ದೂದಪೀರಾಂ ದರ್ಗಾ ಅಭಿವೃದ್ಧಿಗೆ ನೆರವು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶ-ವಿದೇಶಗಳಲ್ಲಿ ಭಾವೈಕ್ಯತೆಯ ಕೇಂದ್ರವೆಂದು ಪ್ರಸಿದ್ಧಿಯಾಗಿರುವ ಲಕ್ಷ್ಮೇಶ್ವರ ಪಟ್ಟಣದ ದೂದಪೀರಾಂ ದರ್ಗಾ ಅಭಿವೃದ್ಧಿಗೆ ವಕ್ಫ್ ಮಂಡಳಿಯಿಂದ ಹಾಗೂ ಸರಕಾರದಿಂದ ಅವಶ್ಯವಿರುವ ಎಲ್ಲ ನೆರವುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ರಾಜ್ಯ ವಕ್ಫ್ ಬೋರ್ಡ್ ಮಂಡಳಿ ಅಧ್ಯಕ್ಷ ಹಾಪೀಜ್ ಸೈಯದ್ ಮೊಹಮ್ಮದ ಅಲಿ ಅಲ್ ಹುಸೈನಿ ಭರವಸೆ ನೀಡಿದರು.

ಅವರು ಶುಕ್ರವಾರ ಪಟ್ಟಣದ ದೂದಪೀರಾಂ ದರ್ಗಾದ ಶಾದಿಮಹಲ್‌ನಲ್ಲಿ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ದೂದಪೀರಾಂ ದರ್ಗಾ ಕಮಿಟಿ ಮತ್ತು ಅಂಜುಮನ್ ಎ-ಇಸ್ಲಾಂ ಕಮಿಟಿಯವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ದರ್ಗಾಕ್ಕೆ ತನ್ನದೇ ಆದ ವೈಶಿಷ್ಠ್ಯತೆಯಿದೆ. ದರ್ಗಾಗಳಲ್ಲಿ, ಮುತ್ತುವಲ್ಲಿಗಳಾಗಲಿ, ಕಮಿಟಿಗಳಾಗಲಿ ಎಲ್ಲಿಯೇ ಕಾರ್ಯ ನಿರ್ವಹಿಸಿದರೂ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಇವೆಲ್ಲದಕ್ಕೂ ವಕ್ಫ್ ಬೋರ್ಡ್ ಜವಾಬ್ದಾರಿಯಾಗಿರುತ್ತದೆ ಎನ್ನುವದನ್ನು ಗಮನದಲ್ಲಿರಿಸಿಕೊಳ್ಳಬೇಕು. ಎಲ್ಲ ಕಡೆಗಳಲ್ಲಿ ಅಲ್ಲಿನ ಕಮಿಟಿಯವರು ಸಾಕಷ್ಟು ಬೇಡಿಕೆಗಳನ್ನು ಇಡುವದು ಸಹಜ. ಆದರೆ ಬೇಡಿಕೆಗಳನ್ನು ಆದ್ಯತಾನುಸಾರ ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ. ವಕ್ಫ್ ಮಂಡಳಿ ರಾಜ್ಯದ ಬಹುದೊಡ್ಡ ಕಮಿಟಿಯಾಗಿದ್ದು, ಅದರ ಮಂಡಳಿ ಅಧ್ಯಕ್ಷನನ್ನಾಗಿ ನೇಮಕ ಮಾಡಿರುವದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿ ಆರ್ಥಿಕ ನೆರವು ದೊರಕಿಸಿಕೊಡುವ ಭರವಸೆ ನೀಡಿದರು. ವೇದಿಕೆಯಲ್ಲಿ ಆಶೀಫಅಲಿ ಹೀರಾಹುಸೇನ್, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಜಯಕ್ಕ ಕಳ್ಳಿ, ಹುಮಾಯೂನ್ ಮಾಗಡಿ, ಎಂ.ಎಂ. ಗದಗ, ಡಾ. ಅಬ್ದುಲ್‌ಕರೀಂ ಪಟವೇಗಾರ, ಸುಲೇಮಾನ ಕಣಕೆ, ಸೈಯದ್‌ಅಲಿ ಹುಸೇನ್ ಹೈದರಲಿ, ದಿಶಾಂತ ಪಠಾಣ, ಮಾಜಿ ಶಾಸಕ ರಾಮಣ್ಣ ಲಮಾಣಿ, ದಾದಾಪೀರ ಮುಚಾಲೆ, ವೀರಯ್ಯ ಮಠಪತಿ, ಸಾಹೇಬ್‌ಜಾನ್, ಹವಾಲ್ದಾರ್ ನಜೀರ್‌ಅಹ್ಮದ್ ಗದಗ, ಎ.ಜಿ. ಸೂರಣಗಿ, ಕರೀಂಖಾನವರ, ಇಮ್ರಾನ್ ಪೀರಜಾದೆ, ಆಸೀಪ್ ಅಲಿ ಸೇರಿದಂತೆ ದರ್ಗಾ ಹಾಗೂ ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಹಾವೇರಿ ಲೋಕಸಭಾ ಕ್ಷೇತ್ರದ ಯುವ ಮುಖಂಡ, ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಎಲ್ಲ ಸಮಾಜಗಳೊಂದಿಗೆ ಹೊಂದಿಕೊಂಡು ಸಾಗುವ ನಿಟ್ಟಿನಲ್ಲಿ ಮುಂದಾಗಬೇಕು. ಮುಸ್ಲಿಂ ಸಮಾಜದವರು ಒಗ್ಗಟ್ಟಿನಿಂದ ಎಲ್ಲ ಕಾರ್ಯಗಳನ್ನು ಮಾಡುತ್ತಿರುವದು ಶ್ಲಾಘನೀಯ. ಈಗಾಗಲೇ ಲಕ್ಷ್ಮೇಶ್ವರಕ್ಕೆ ಅಲ್ಪ ಸಂಖ್ಯಾತರ ಇಲಾಖೆಯಿಂದ 2 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!