ರಾಮನಗರ:- ಮಾಗಡಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿ ಆಗಲು ಯತ್ನಿಸಿದ ಕುಖ್ಯಾತ ಕಳ್ಳರಿಬ್ಬರನ್ನು ಮುಂಬೈ ಏರ್ಪೋರ್ಟ್ ಬಳಿ ಅರೆಸ್ಟ್ ಮಾಡಿದ್ದಾರೆ.
40 ವರ್ಷದ ಕಡೂರು ಸಾದಿಕ್, 39 ವರ್ಷದ ಹಮ್ಜಾ ಅಲಿಯಾಸ್ ಅಮೀರ್ ಬಂಧಿತರು ಎನ್ನಲಾಗಿದೆ. ಸದ್ಯ ಮಾಗಡಿ ಪೊಲೀಸರ ಕಾರ್ಯಾಚರಣೆಗೆ ಮುಂಬೈ ಪೊಲೀಸರು ಶಾಕ್ ಆಗಿದ್ದಾರೆ.
ಇಬ್ಬರು ಆರೋಪಿಗಳ ಬಳಿ 1 ಗನ್ ಹಾಗೂ 5 ಜೀವಂತ ಗುಂಡು, 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 11,49,000 ನಗದು ಜಪ್ತಿ ಮಾಡಲಾಗಿದೆ.
ಬಂಧಿತರಿಬ್ಬರು ಸುಮಾರು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಕಲಿ ಪಾಸ್ಪೋರ್ಟ್ ಬಳಸಿ ಏರ್ಪೋರ್ಟ್ ಪೊಲೀಸರನ್ನೇ ಯಾಮಾರಿಸಿದ್ದರು ಎನ್ನಲಾಗಿದೆ.
ಸದ್ಯ ಕಳ್ಳರನ್ನು ಸೆರೆಹಿಡಿದ ಪೊಲೀಸರಿಗೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ 20 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.



