ಬೆಂಗಳೂರು: ಗಲ್ಫ್ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆ ಮತ್ತು ಗ್ಯಾಸ್ ಪೂರೈಕೆಯಲ್ಲಿ ಅಸ್ಥಿರತೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ LPG ಸಿಲಿಂಡರ್ ಕೊರತೆ ಇದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಭಯ ಸೃಷ್ಟಿಯಾಗುತ್ತಿದೆ.
ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಮಾತನಾಡಿ, “ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಕೊರತೆ ಇರುವುದಿಲ್ಲ. ಸುಳ್ಳು ವದಂತಿಗಳಿಗೆ ಗಮನ ಕೊಡಬೇಡಿ. ಗೃಹಬಳಕೆ ಅನಿಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಸಹಾಯವಾಣಿ 9611404384 ಸಂಪರ್ಕಿಸಬಹುದು” ಎಂದು ಹೇಳಿದರು.
ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿಸಿ ರಾವ್ ಮಾತನಾಡಿ, “ಬ್ಯಾಂಕ್, ಐಟಿ ಕಂಪನಿಗಳು, ಆಸ್ಪತ್ರೆಗಳಿಗೆ ಹೋಟೆಲ್ಗಳು ಪ್ರಮುಖ ಸೇವೆ ನೀಡುತ್ತಿವೆ. ಹೋಟೆಲ್ಗಳು ಬಂದ್ ಆಗುವುದಿಲ್ಲ. ಬಾಗಿಲು ಮುಚ್ಚಿದ ಹೋಟೆಲ್ಗಳನ್ನು ಕೂಡ ಶೀಘ್ರದಲ್ಲಿಯೇ ತೆರೆಯಲಾಗುತ್ತದೆ. 98% ಹೋಟೆಲ್ಗಳು ಈ ಸಮಯದಲ್ಲಿ ಬೆಲೆ ಏರಿಸುವುದಿಲ್ಲ” ಎಂದಿದ್ದಾರೆ.



