ಬೆಳಗಾವಿ: ಜಸ್ಟ್ 4500 ಲಂಚ ಸ್ವೀಕರಿಸಲು ಹೋಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ಲೋಕಾ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಖಾನಾಪುರದಲ್ಲಿ ಜರುಗಿದೆ.
ಸರ್ವೇಯರ್ ವಿನೋದ್ ಸಂಬನ್ನಿ ಲೋಕಾ ಬಲೆಗೆ ಬಿದ್ದ ಅಧಿಕಾರಿ. ಸದಾಶಿವ ಕಾಂಬಳೆ ಎನ್ನುವರ ಹತ್ತಿರ ಪಿ.ಟಿ.ಶೀಟ್ ಮಾಡಿಕೊಡಲು ಸರ್ವೇಯರ್ ವಿನೋದ್ ಸಂಬನ್ನಿ ಎಂಬುವವರು ನಾಲ್ಕುವರೆ ಸಾವಿರ ಲಂಚ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ. ಇದರ ಬಗ್ಗೆ ಸದಾಶಿವ ಕಾಂಬಳೆ ಅವರು ಬೆಳಗಾವಿ ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದರು, ದೂರು ದಾಖಲಾಗುತ್ತಿದಂತೆ ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಭರತ ರೆಡ್ಡಿ ಅವರ ನೇತೃತ್ವದಲ್ಲಿ ತಂಡ ಖಾನಾಪೂರ ಸರ್ವೇಯರ್ ವಿನೋದ್ ಸಂಬನ್ನಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.



