ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸೋಲದೇವನಹಳ್ಳಿ ಸಬ್ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜಾಲಹಳ್ಳಿ ವಿಭಾಗದ ಎನ್- 9 ಉಪ ವಿಭಾಗದ ಹಲವೆಡೆ ಇಂದಿನಿಂದ ನ.23ರವರೆಗೆ ಬೆಳಗ್ಗೆ 10.30 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಪವರ್ ಕಟ್ ಇರಲಿದೆ.
ಎಲ್ಲೆಲ್ಲಿ ಇರಲ್ಲ ಪವರ್:-
ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್, ಶಿವಕುಮಾರ ಸ್ವಾಮೀಜಿ ಲೇಔಟ್, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ, ಗುಣಿ ಅಗ್ರಹರ್, ಸೋಮಶೀತಿಹಳ್ಳಿ, ಗಾಣಿಗರಹಳ್ಳಿ, ಪೈಪ್ಲೈನ್ ರೋಡ್, ಕೆರೆಗುಡ್ಡಹಳ್ಳಿ, ಹುರುಳಿಚಿಕ್ಕನಹಳ್ಳಿ,
ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕನಗರ, ಚಿಕ್ಕಬಾಣಾವರ, ಕೆ.ಟಿ.ಪುರ, ಐಐಎಚ್ಆರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ರಾಜ್ಯ ಮೀನುಗಾರಿಕೆ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಹುರುಳಿಚಿಕ್ಕನಹಳ್ಳಿ, ಕುರುಬರಹಳ್ಳಿ, ಕುರುಬರಹಳ್ಳಿ ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ, ಸೋಲದೇವನಹಳ್ಳಿ, ಸಾಸುವೆಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



