HomeKarnataka Newsಬೆಂಗಳೂರು ಕಾಲ್ತುಳಿತ; ನ್ಯಾಯಾಂಗ ತನಿಖೆಗೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಬೆಂಗಳೂರು ಕಾಲ್ತುಳಿತ; ನ್ಯಾಯಾಂಗ ತನಿಖೆಗೆ ನಿಖಿಲ್ ಕುಮಾರಸ್ವಾಮಿ ಆಗ್ರಹ

For Dai;y Updates Join Our whatsapp Group

Spread the love

ಬೆಂಗಳೂರು: ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ನಡೆಯಬೇಕು. ಆಗ ಮಾತ್ರ ಅಮಾಯಕ ಜೀವಗಳಿಗೆ ಮತ್ತು ಹೆತ್ತವರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾವಿನಲ್ಲೂ ನಿಮ್ಮ ಸಣ್ಣತನ ಮಾಡಬಾರದು, ಕ್ರೀಡಾ ಮನೋಭಾವದಿಂದ ನೋಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗ ಕಣ್ಣೀರು ಹಾಕಿದರೆ ಉಪಯೋಗ ಏನು?

ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ; ಸಾವಿನ ನಂತರವೂ ಡಿಕೆಶಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಕಪ್‌ ಗೆ ಮುತ್ತಿಕ್ಕಿ, ಫೋಟೋ ತೆಗೆಸಿಕೊಂಡು ರೀಲ್ಸ್‌ ಮಾಡಿದ್ದಾರೆ, ನಾಚಿಕೆ ಆಗಲ್ವಾ. ಈಗ ಕಣ್ಣೀರು ಹಾಕಿದರೆ ಪ್ರಯೋಜನ ಏನು ಎಂದು ಅವರು ಕಿಡಿಕಾರಿದರು.

ಕಾಲ್ತುಳಿತ ದುರಂತದಲ್ಲಿ 12 ರಿಂದ 33 ವರ್ಷದವರು ಸಾವನಪ್ಪಿದ್ದಾರೆ. ಸರ್ಕಾರ ಇವರಿಗೆ ಐವತ್ತು ಕೋಟಿ ಹಣ ಪರಿಹಾರ ನೀಡಿದರು ಹೋಗಿರುವ ಜೀವವನ್ನ ಮತ್ತೆ ತರಲು ಸಾಧ್ಯವಿಲ್ಲ. ಮಕ್ಕಳನ್ನ ಕಳೆದುಕೊಂಡ ಪೋಷಕರ ಭವಿಷ್ಯದ ಮುಂದಿನ ಸ್ಥಿತಿ ಏನು.? ಆ ಕುಟುಂಬದಲ್ಲಿ ಅಕ್ಕ ತಂಗಿ ಇದ್ದರೆ ಅವರ ವಿದ್ಯಾಭ್ಯಾಸಕ್ಕೆ ಸರ್ಕಾರ ಜವಾಬ್ದಾರಿ ತಗೋಬೇಕು. ಅವರಿಗೆ ಮುಂದೆ ಉದ್ಯೋಗವಕಾಶ ಮಾಡಿಕೊಡಬೇಕು ಎಂದು ಅವರು ಅಗ್ರಹಿಸಿದರು.

ವಿಜಯೋತ್ಸವವನ್ನ ಎರಡು ಕಡೆ ಯಾಕೆ ಆಯೋಜನೆ ಮಾಡಬೇಕಿತ್ತು. ಚಿನ್ನಸ್ವಾಮಿ ಸ್ಟೇಡಿಯಂಗಿಂತ ಜಾಗ ಬೇಕಾ. ಜನಕ್ಕೆ ಫ್ರಿ ಟಿಕೆಟ್ ಅಂತ ಹೇಳಿದ್ರು, ಫ್ರಿ ಅನ್ನೋದು ಇವರಿಗೆ ರೂಡಿಯಾಗಿದೆ ಅದಕ್ಕೆ ಫ್ರಿ ಸಾವು ಕೊಟ್ಟಿದ್ದಿರಾ.? ಎಂದು ಅವರು ಪ್ರಶ್ನಿಸಿದರು.

ದುರಂತವನ್ನ ಕ್ರೀಡಾ ಮನೋಭಾವದಿಂದ ನೋಡಿ

ಅಭಿನಂದನಾ ಸಮಾವೇಶದಲ್ಲಿ ಅಂತರಾಷ್ಟ್ರೀಯ ಆಟಗಾರರಿಗೆ ಯಾವ ರೀತಿ ಗೌರವ ಕೊಟ್ಟಿದ್ದಿರಾ.?ನಾವೆಲ್ಲಾ ಬೌರಿಂಗ್ ಆಸ್ಪತ್ರೆಗೆ ತೆರಳಿದ್ದಾಗ ಆಗ ಸಿಎಂ ಅವರು ಬೇಟಿ ಮಾಡ್ತಾರೆ. ಅಲ್ಲಿಯವರೆಗೂ ಸಿಎಂ ಜನಾರ್ಧನ ಹೋಟೆಲ್ ನಲ್ಲಿ ಟೀ ಕುಡಿತ್ತಿದ್ರಾ..? ಆಗಿರುವ ಘಟನೆಯನ್ನ ಕ್ರೀಡಾ ಮನೋಭಾವದಿಂದ ನೋಡಿ ರಾಜಕೀಯ ಮಾಡ್ಬೇಡಿ ಎಂದು ಕಿಡಿಕಾರಿದರು.

ತೆಲಾಂಗಣದಲ್ಲಿ ಚಲನಚಿತ್ರ ಬಿಡುಯಾಗಿ ದುರ್ಘಟನೆ ನಡೆದಾಗ ಯಾವ ರೀತಿ ಕ್ರಮ ತೆಗೆದುಕೊಂಡರಿ, ಎಲ್ಲಾ ಪ್ರೊಸೆಸ್ ಮಾಡುದ್ರಿ ಅವತ್ತು ನೀವು ಆ ನಟ ಮೇಲೆ ಎಫ್ ಐ ಆರ್ ಹಾಕಿದ್ರಿ, ಕಾಂಗ್ರೆಸ್ ಸರ್ಕಾರ ಆ ನಟನನ್ನ ಅರೆಸ್ಟ್ ಮಾಡಿದ್ದೀರಾ.ಈಗ ನಿಮ್ಮ‌ ಸರ್ಕಾರ ಇದೆ ಯಾರ ಮೇಲೆ ಎಫ್ ಐ ಆರ್ ಹಾಕ್ತಿರಾ..? ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

ನ್ಯಾಯಾಧೀಶರ ಮೂಲಕ ತನಿಖೆಗೆ ಒತ್ತಾಯ

ಈಗ ಮ್ಯಾಜಿಸ್ಟ್ರೇಟ್ ಮೂಲಕ ತನಿಖೆ ಮುಂದುವರೆಸಿ ಪಾರದರ್ಶಕವಾಗಿ ಮಾಡ್ತಿವಿ ಎಂದು ಬಿಂಬಿಸಲು ಹೊರಟಿದ್ದಿರಾ.? ಅವರು ಯಾರ ಅಂಗಳದಲ್ಲಿ ಕೆಲಸ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಪಾರದರ್ಶಕವಾಗಿ ತನಿಖೆ ಮಾಡುವುದಾದರೆ ನ್ಯಾಯಾಧೀಶರ ಮೂಲಕ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು.

ರಾಜ್ಯದ ಇತಿಹಾಸದ ಅತೀ ಎರಡನೇ ಕಾಲ್ತುಳಿತ ದುರಂತ

ನಿನ್ನೆಯ ಕಾಲ್ತುಳಿತ ದುರಂತ ರಾಜ್ಯದ ಇತಿಹಾಸದ ಅತೀ ಎರಡನೇ ದೊಡ್ಡ ಪ್ರಕರಣವಾಗಿದೆ.ಭಾರತ ವರ್ಲ್ಡ್ ಕಪ್ ಗೆದ್ದಾಗ ಮುಂಬೈನಲ್ಲಿ ಪೆರೆಡ್ ನಲ್ಲಿ ಸುಮಾರು 3ಲಕ್ಷ ಕ್ಕೂ ಹೆಚ್ಚು ಜನ ಭಾಗಿಯಾಗಿದ್ರು. ಯಾವುದಾದರೂ ಒಂದು ದುರ್ಘಟನೆ ನಡೆಯಿತಾ.? ಪ್ರಧಾನಿಯವರು ರಾಜ್ಯಕ್ಕೆ ಭೇಟಿ ಕೊಟ್ಟಾಗ ಪೊಲೀಸ್ ಭದ್ರತೆ ಆಯ್ತಾ.? ಎಂದು ವಾಗ್ದಾಳಿ ನಡೆಸಿದರು.

ಸಿಎಂ ಅವರು ಮೂರರಿಂದ‌ ನಾಲ್ಕು ಲಕ್ಷ‌ ಜನ ನಿರೀಕ್ಷೆಗೂ ಮೀರಿದ ಜನ ಸೇರಿದ್ರು ಎಂದಿದ್ದಾರೆ. ಪಹಲ್ಗಾಮ್ ಘಟನೆಯ ಬಳಿಕ ಇಂಟೆಲಿಜೆನ್ಸ್‌ ಸತ್ತು ಹೋಗಿತ್ತಾ ಎಂದು ಸಿಎಂ ಅವರು ಹೇಳಿದ್ರು. ಇವತ್ತು ಟಿ ಕುಡಿಯೋಕೆ ಟಿಫನ್ ತಿನ್ನೋಕೆ ಹೋಗಿತ್ತಾ.? ಘಟನೆ ಬಗ್ಗೆ ಗೃಹ ಸಚಿವರಿಂದ ಒಂದು ಹೇಳಿಕೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಗೃಹ ಸಚಿವರ ಅಧಿಕಾರ ಮೇಲೆ ಸವಾರಿ ಮಾಡಿ ಜಿಪಿಎ ತಗೊಂಡಿದ್ದಾರೆ ಕೆಲವರು.ಇದರ ಬಗ್ಗೆ ಗೃಹ ಸಚಿವರಿಗೆ ಯಾವುದೆ ಮಾಹಿತಿ ಇದ್ದಂಗಿಲ್ಲಾ.! ಸಿಎಂ‌ ಅವರನ್ನ ಓವರ್ ಟೇಕ್ ಮಾಡಿದ ಮಹಾನುಭಾವ ಒಬ್ಬರು ಇದ್ದಾರೆ. ಡಿಸಿಎಂ ಏನಾದ್ರು RCB ನಾಯಕ ರಜತ್ ಪಾಟಿದಾರ್ ಬದಲು ಕಫ್ ಗೆಲ್ಲೋದಕ್ಕೆ ಕಾರಣ ಆಗಿದ್ರಾ..? ಎಂದು ಆಕ್ರೋಶ ವ್ಯಕ್ತಪಡಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!