ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ ಐವರು ಉಪನ್ಯಾಸಕರನ್ನು ವಜಾಗೊಳಿಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸ್ವರೂಪ್ ಕುಮಾರ್ , ರಾಮಾಂಜನೇಯ ,ರಂಗಸ್ವಾಮಿ, ಜಗನ್ನಾಥ್ ಹಾಗು ಶಿವರಾಮ್ ವಿವಿಯಿಂದ ಸಸ್ಪೆಂಡ್ ಆದ ಉಪನ್ಯಾಸಕರಾಗಿದ್ದು,
ಇವರೆಲ್ಲರೂ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಅವಧಿ ಕೂಡ ಮುಗಿದಿತ್ತು. ಅವಧಿ ಮುಗಿದರೂ ಅರ್ಜಿ ಹಾಕಿದರೆ ಮತ್ತೆ ಸೇವೆ ಮುಂದುವರಿಸಲು ಅವಕಾಶವಿತ್ತು. ಆದರೆ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಹೊಂದಿರುವ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಲೈಂಗಿಕ ದೌರ್ಜನ್ಯ ಹಾಗು ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಆರೋಪ ಹೊಂದಿದ್ದ ಇವರಿಂದಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸಾಕಷ್ಟು ಮುಜುಗರ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಿರುವುದಷ್ಟೇ ಅಲ್ಲದೇ ಇನ್ನು ಮುಂದೆ ವಿವಿಗೆ ಅರ್ಜಿ ಹಾಕಿದರೂ ಕೆಲಸ ಸಿಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.



