ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಇದೀಗ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 4ರ ರಾತ್ರಿ ಸುಮಾರು 1:30ಕ್ಕೆ ಪ್ಯಾಟ್ರಾಯನ್ಪುರದ ಎಂ.ಎಂ. ರಸ್ತೆಯಲ್ಲಿ ನಡೆದ ಈ ಅಪಘಾತದಲ್ಲಿ ದಿವ್ಯ ಸುರೇಶ್ ಅವರು ಚಾಲನೆ ಮಾಡುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಹೌದು ದಿವ್ಯಾ ಕಾರ್ ಡಿಕ್ಕಿ ರಭಸಕ್ಕೆ ಬೈಕ್ ನಿಂದ ಬಿದಿದ್ದ ಮೂವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ.
ಕಿರಣ್, ಅನುಷಾ, ಅನಿತಾ ಎಂಬುವರು ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ.ರಸ್ತೆ ಬಳಿ ನಾಯಿಗಳಿದ್ದು, ಭಯದಿಂದ ದೂರುದಾರ ಕಿರಣ್ ಬೈಕ್ ಅನ್ನ ಸ್ವಲ್ಪ ಬಲಕ್ಕೆ ಹೋಗಿದ್ದಾರೆ. ಈ ವೇಳೆ ವೇಗವಾಗಿ ಬಂದ ದಿವ್ಯಾ ಸುರೇಶ್ ಕಾರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಕಾರ್ ಡಿಕ್ಕಿ ಹೊಡೆದಾಗ ಅನಿತಾ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿತ್ತು. ಕೂಡಲೇ ಗಾಯಾಳುಗಳನ್ನು ನೋಡದೇ ದಿವ್ಯಾ ಸುರೇಶ್ ಕಾರ್ ನಿಲ್ಲಿಸದೇ ಎಸ್ಕೇಪ್ ಆಗಿದ್ದರು.
ಗಾಯಳು ಸಂಬಂಧಿ ಕಿರಣ್ ಬಳಿಕ 7 ನೇ ತಾರೀಖು ಬ್ಯಾಟರಾಯನಪುರ ಸಂಚಾರಿ ಠಾಣೆ ಗೆ ದೂರು ನೀಡಿದ್ದರು. ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಘಟನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಟಿ ದಿವ್ಯಾ ಸುರೇಶ್ ಕಾರ್ ನಿಂದ ಡಿಕ್ಕಿ ಹೊಡೆದು ಹೋಗಿರೋದು ಗೊತ್ತಾಗಿದೆ.
ಬಳಿಕ ಸಿಸಿಟಿವಿ ಮೂಲಕ ಕಾರ್ ನಂಬರ್ ಟ್ರೇಸ್ ಮಾಡಿ ದಿವ್ಯಾ ಸುರೇಶ್ ಅವರನ್ನು ಪೊಲೀಸರು ಕರೆಸಿದ್ದರು. ಬಳಿಕ ದಿವ್ಯಾ ಸುರೇಶ್ ಕಾರ್ ಪತ್ತೆ ಮಾಡಿ ಸೀಜ್ ಮಾಡಲಾಗಿದೆ. ರಾತ್ರೋ ರಾತ್ರಿ ಬಂದು ದಿವ್ಯಾ ಸುರೇಶ್ ಕಾರು ಬಿಡಿಸಿಕೊಂಡು ಹೋಗಿದ್ದರು. ಸದ್ಯ ಬ್ಯಾಟರಾಯನಪುರ ಸಂಚಾರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



