ವಿಜಯಸಾಕ್ಷಿ ಸುದ್ದಿ, ನರೇಗಲ್ : ಅಂದು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿದ ಸ್ಥಾವರ, ಕೆರೆ, ಗುಡಿ, ಗೋಪುರಗಳು, ಪೇಟೆಗಳು, ಸಂಪರ್ಕ ರಸ್ತೆಗಳು ಬೆಂಗಳೂರನ್ನು ಇಂದಿಗೂ ಆದರ್ಶ ನಗರವನ್ನಾಗಿಸಿವೆ.
ಕೆಂಪೇಗೌಡರ ಮುಂದಾಲೋಚನೆಯಿಂದ ಇದೆಲ್ಲ ಸಾಧ್ಯವಾಗಿದ್ದು, ಅವರ ಸಾಧನೆ ನಮಗೆಲ್ಲ ಸ್ಪೂರ್ತಿ ಎಂದು ವಿದ್ಯಾರ್ಥಿನಿ ಶಾಂಭವಿ ಹಿರೇವಡೆಯರ ನುಡಿದಳು.
ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಕಿಯರ ಪೌಢಶಾಲೆಯಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೆಗೌಡರ ಜನ್ಮದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕೆಂಪೇಗೌಡರ ಸಮಗ್ರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸಿದಳು. ವಿದ್ಯಾರ್ಥಿಗಳಿಗಾಗಿ ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಸಂಗಮೇಶ ಹೂಲಗೇರಿ ವಹಿಸಿದ್ದರು. ಶಿಕ್ಷಕ ಎಸ್.ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಸಿ. ಜೋಗಿ, ಎಸ್.ಎಫ್. ಧರ್ಮಾಯತ, ಆರ್.ಎಮ್. ಗುಳಬಾಳ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.



