HomePolitics Newsಶಿಗ್ಗಾಂವಿ, ಸಂಡೂರು ಉಪ ಚುನಾವಣೆಗೆ ಬಿಜೆಪಿ ಪಟ್ಟಿ ರಿಲೀಸ್: ಭರತ್ ಬೊಮ್ಮಾಯಿ, ಬಂಗಾರು ಹನುಮಂತುಗೆ ಟಿಕೆಟ್!

ಶಿಗ್ಗಾಂವಿ, ಸಂಡೂರು ಉಪ ಚುನಾವಣೆಗೆ ಬಿಜೆಪಿ ಪಟ್ಟಿ ರಿಲೀಸ್: ಭರತ್ ಬೊಮ್ಮಾಯಿ, ಬಂಗಾರು ಹನುಮಂತುಗೆ ಟಿಕೆಟ್!

For Dai;y Updates Join Our whatsapp Group

Spread the love

ಬೆಂಗಳೂರು:- ಶಿಗ್ಗಾಂವಿ, ಸಂಡೂರು ಉಪ ಚುನಾವಣೆಗೆ ಬಿಜೆಪಿ ಪಟ್ಟಿ ರಿಲೀಸ್ ಆಗಿದ್ದು, ಭರತ್ ಬೊಮ್ಮಾಯಿ, ಬಂಗಾರು ಹನುಮಂತುಗೆ ಲಕ್ ಒಲಿದು ಬಂದಿದೆ.

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆದ ಬೆನ್ನಲ್ಲೇ, ರಾಜಕೀಯ ರಂಗೇರಿದೆ. ಅದರಲ್ಲೂ ಇಂದು ಶಿಗ್ಗಾಂವಿ ಮತ್ತು ಸಂಡೂರಿಗೆ ಅಭ್ಯರ್ಥಿಗಳನ್ನು ಬಿಜೆಪಿ ಹೈಕಮಾಂಡ್​ ಪ್ರಕಟಿಸಿದೆ.

ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಇನ್ನೂ ಘೋಷಣೆಯಾಗದ ಕಾರಣ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಬಿಜೆಪಿ ರಾಜ್ಯ ಘಟಕದ ಪಟ್ಟಿ ಬರುವ ಮುನ್ನವೇ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಬೆಲ್ಲದ್‌ ಸೇರಿದಂತೆ ಕೆಲ ಬಿಜೆಪಿ ನಾಯಕರು ಬೊಮ್ಮಾಯಿ ಪುತ್ರನ ಪರ ಬ್ಯಾಟಿಂಗ್‌ ಮಾಡಿದ್ದರು. ಅದರಂತೆ ಟಿಕೆಟ್ ಘೋಷಣೆ ಆಗಿದೆ.

ಇನ್ನೂ ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್‌ ರೇಸ್‌ನಲ್ಲಿ ಬಂಗಾರು ಹನುಮಂತು ಮತ್ತು ಕೆ ಎಸ್ ದಿವಾಕರ್ ಅವರ ಹೆಸರಿತ್ತು. ಕಳೆದ ಚುನಾವಣೆಯಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ದಿವಾಕರ್‌ ಪರಾಭವಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!