ಅಡುಗೆ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥಗಳಲ್ಲಿ ಕಾಳು ಮೆಣಸು ಅಥವಾ ಕರಿಮೆಣಸಿನ ಪಾತ್ರ ಅಗಾಧ. ಅಡುಗೆಗೆ ಬಳಸುವ ಈ ಕಾಳು ಮೆಣಸು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಕೆಲ ಆರೋಗ್ಯ ಸಮಸ್ಯೆಗಳಿಗೆ ಕಾಳು ಮೆಣಸಿನಿಂದ ಕಷಾಯ ಮಾಡಿ ಕುಡಿಯುತ್ತಾರೆ. ನಿಮ್ಮ ಮನೆಯಲ್ಲಿ ಕಾಳು ಮೆಣಸು ಇದ್ದರೆ, ಕೆಲವು ಸಮಸ್ಯೆಗಳಿಗೆ ಇದರಿಂದ ಮನೆ ಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ಕಾಳು ಮೆಣಸು ಆರೋಗ್ಯ ಸಮಸ್ಯೆಗಳಿಗೆ ದಿವ್ಯ ಔಷಧಿ:
*ಕೆಮ್ಮು – ದಮ್ಮು, ನೆಗಡಿ, ಸೀನು ಇದ್ದಲ್ಲಿ ಇದರ ಚೂರ್ಣವನ್ನು ಕಲ್ಲುಸಕ್ಕರೆ, ಜೇನುತುಪ್ಪದೊಂದಿದೆ ಅರ್ಧ ಚಮಚ ದಿನಕ್ಕೆ ಎರಡು ಬಾರಿ ಸೇವಿಸಬೇಕು.
*ಜೀರ್ಣಶಕ್ತಿ ಹಾಗೂ ಹಸಿವು ಹೆಚ್ಚಿಸಲು ಇದರ ಚೂರ್ಣವನ್ನು ಮಜ್ಜಿಗೆಯೊಂದಿಗೆ ಬಳಸಬೇಕು.
*ಚೂರ್ಣವನ್ನು ಹಣೆಗೆ ಲೇಪಿಸುವುದರಿಂದ ನೆಗಡಿ ಸಂಬಂಧಿತ ತಲೆನೋವು ಶಮನವಾಗುತ್ತದೆ.
*ಇದರ ಚೂರ್ಣವನ್ನು ನಸ್ಯರೂಪದಲ್ಲಿ ಪ್ರಯೋಗಿಸುವುದರಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ.
*ಇದರ ತೈಲವು ದದ್ರು ಮುಂತಾದ ಚರ್ಮರೋಗಕ್ಕೆ ಹಚ್ಚಲು ಬಳಸಲಾಗುತ್ತದೆ
*ಆರ್ಧ ಚಮಕ ಕಾಳುಮೆಣಸಿನ ಪುಡಿಯನ್ನು ವಿಳ್ಯದೆಲೆಯೊಂದಿಗೆ ಸೇವಿಸುತ್ತಾ ಬಂದರೆ ಬೊಜ್ಜು ಕರಗುತ್ತದೆ.
*ನೆಗಡಿಯಲ್ಲಿ ಕಾಳುಮೆಣಸಿನ ಚೂರ್ಣವನ್ನು ಬೆಲ್ಲದ ಜೊತೆ ಸೇರಿಸಿ ಸೇವಿಸುವುದರಿಂದ ಉತ್ತಮ
*ಮೊಡವೆಗೆ ಕಾಳುಮೆಣಸಿನ ಚೂರ್ಣವನ್ನು ವೀಳ್ಯದೆಲೆ ರಸದೊಂದಿಗೆ ಹಚ್ಚಬೇಕು.
*ಕಾಳುಮೆಣಸು ಶ್ರೇಷ್ಠ ಕಫಹರವೂ ಕೂಡ ಆಗಿದೆ.



