ಬೆಳಗಾವಿ:- ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಆಗಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸಂಪುಟದಲ್ಲಿ ಯಾರು ವಿರೋಧ ಮಾಡಿಲ್ಲ. ಚರ್ಚೆಯ ಅಪೂರ್ಣವಾಗಿದೆ. ನಾನು ಸಂಪುಟದಲ್ಲಿ ಪೂರ್ಣ ಪ್ರಮಾಣ ಚರ್ಚೆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ.
ಇನ್ನು ಶಿವಾನಂದ ಪಾಟೀಲ್ ಹಾಗೂ ಎಂ ಬಿಪಿ ನಡುವೆ ವಾದ ವಿವಾದ ನಡೆದಿಲ್ಲ. ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಯಾವುದೇ ಸಮಾಜಕ್ಕೆ ಹಾನಿಯಾಗಬಾರದು ಎಂಬ ರೀತಿಯಲ್ಲಿ ತೀರ್ಮಾನ ತೆಗೆದುಕೊಂಡು, ಎಲ್ಲರಿಗೂ ನ್ಯಾಯ ಕೊಡಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಇನ್ನೂ ಇದೇ ವೇಳೆ ಕಾರು ಅಪಘಾತ ಪ್ರಕರಣದ ಆರೋಪಿ ಬಂಧನ ವಿಚಾರವಾಗಿ ಮಾತನಾಡಿ, ಘಟನೆ ನಡೆದ ಮೂರು ತಿಂಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬೆಳಗಾವಿ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನನಗೆ ಆರೋಪಿಯನ್ನು ಹಿಡಿಯುತ್ತಾರೆ ಅಂತ ಅನಿಸರಲಿಲ್ಲ. ಕಲರ್ ಮ್ಯಾಚ್ ಮಾಡಲು ಎಫ್ ಎಸ್ ಎಲ್ ಮೊರೆ ಸಹ ಹೋಗಿದರು. ಹಿಟ್ ಅಂಡ್ ರನ್ ಕೇಸ್ ಬಹುತೇಕ ಪತ್ತೆ ಆಗಲ್ಲ. ಅಪಘಾತದ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ ಎಂದರು.



