HomeGadag Newsಮಾದಾರ ಚನ್ನಯ್ಯನವರ ಜಯಂತ್ಯುತ್ಸವ ಆಚರಣೆ

ಮಾದಾರ ಚನ್ನಯ್ಯನವರ ಜಯಂತ್ಯುತ್ಸವ ಆಚರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ವತಿಯಿಂದ ಆದ್ಯ ವಚನಕಾರ ಶ್ರೀ ಶಿವಶರಣ ಮಾದಾರ ಚನ್ನಯ್ಯನವರ ಜಯಂತಿಯನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಮಾದಿಗ ಸಮಾಜದ ಹಿರಿಯರು ಹಾಗೂ ನಗರಸಭೆಯ 16ನೇ ವಾರ್ಡಿನ ಸದಸ್ಯರಾದ ಕೃಷ್ಣಾ ಪರಾಪೂರ ಮಾತನಾಡಿ, ಶತಮಾನಗಳಿಂದ ಮಾದಿಗ ಜನಾಂಗವು ಅನ್ಯಾಯ, ತುಳಿತಕ್ಕೆ ಒಳಗಾಗಿದ್ದು, ನಮ್ಮ ಮಾದಿಗ ಜನಾಂಗಕ್ಕೆ ಹಕ್ಕುಗಳು ಹಾಗೂ ಮೀಸಲಾತಿಯಂತಹ ಸೌಲಭ್ಯಗಳು ದೊರಕಬೇಕಾದರೆ ಮಾದಾರ ಚನ್ನಯ್ಯನವರ ಜಯಂತಿಯನ್ನು ಆಚರಿಸಲೇಬೇಕು ಎಂದು ತಿಳಿಸಿದರು.

ಗೋವಿಂದರಾಜ ಬಳ್ಳಾರಿ ಮಾತನಾಡಿ, ಶಿವ ಭಕ್ತರಾಗಿದ್ದ ಮಾದಾರ ಚೆನ್ನಯ್ಯ, ದೇವರಿಗೆ ಅಂಬಲಿ ಉಣಿಸಿದ ಪ್ರಸಂಗ ಅವನ ಉಜ್ವಲ ಭಕ್ತಿಗೆ ಉದಾಹರಣೆ. ಇದೇ ಕಾರಣಕ್ಕೆ ಬಸವಣ್ಣವರು ಮಾದಾರ ಚೆನ್ನಯ್ಯರವರನ್ನು ಹೃದಯಾಂತರಾಳದಿAದ ಸ್ತುತಿಸಿದ್ದಾರೆ. ಮಾದಾರ ಚೆನ್ನಯ್ಯ ಶ್ರೇಷ್ಠ ವಚನಕಾರ. ತನ್ನ ವಚನಗಳಿಗೆ ಯಾವುದೇ ಅಂಕಿತನಾಮವನ್ನು ಬಳಸಿಕೊಂಡಿಲ್ಲ ಎಂದು ತೀಳಿಸಿದರು.

ಯುವರಾಜ ಬಳ್ಳಾರಿ ಮಾತನಾಡಿ, ಮಾದಾರ ಚೆನ್ನಯ್ಯರವರ ವಚನಗಳಲ್ಲಿ ಕುಲ ಕೇಂದ್ರವಾಗಿದೆ. ಅವರ ವಿಚಾರ ಧಾರೆಗಳು ಬಸವಾದಿ ಶರಣರ ಕ್ರಾಂತಿಗೆ ಮೂಲ ಬೀಜಗಳು ಎಂದು ತೀಳಿಸಿದರು.

ಈ ಸಂದರ್ಭದಲ್ಲಿ ಅಶೋಕ ಕುಡಿತಿನಿ, ವೆಂಕಟೇಶ ಬಳ್ಳಾರಿ, ಮಾರುತಿ ಬಳ್ಳಾರಿ, ಪರಶುರಾಮ ಸಂಗಾಪೂರ, ವಿಶಾಲ ಗೋಷಾಲನವರ, ಪೃಥ್ವಿ ಪರಾಪೂರ, ನಾಗರಾಜ ಕಿನ್ನಾರಿ, ಸುಂಕಪ್ಪಾ ಗುತ್ತಿ, ಮಹೇಶ ನಾನಬಾಲ, ನಾರಾಯಣ ದೊಡ್ಡಮನಿ, ಹುಸೇನ ಮಲ್ಲಸಮುದ್ರ, ರಾಮಚಂದ್ರ ಬಳ್ಳಾರಿ, ನಿತಿನ ಬಳ್ಳಾರಿ, ವರ್ಧನ ತೌಜುಲ್, ಪವನ ಬಳ್ಳಾರಿ, ಪ್ರಜ್ವಲ್ ಯಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!