HomeLife Styleಸೀಬೆ ಎಲೆಗಳಿಂದ ಕೊಲೆಸ್ಟ್ರಾಲ್, ಶುಗರ್ ಕಂಟ್ರೋಲ್ ಆಗುತ್ತಾ? ತಜ್ಞರು ಹೇಳಿದ್ದೇನು?

ಸೀಬೆ ಎಲೆಗಳಿಂದ ಕೊಲೆಸ್ಟ್ರಾಲ್, ಶುಗರ್ ಕಂಟ್ರೋಲ್ ಆಗುತ್ತಾ? ತಜ್ಞರು ಹೇಳಿದ್ದೇನು?

For Dai;y Updates Join Our whatsapp Group

Spread the love

ಹಣ್ಣು ಹಣ್ಣಾದ ಸೀಬೆ ಹಣ್ಣು ತಿಂದವರಿಗೆ ಗೊತ್ತು! ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚಾಗಿರುವ ಈ ಹಣ್ಣಿನ ಮರ ಹಳ್ಳಿಕಡೆ ತುಂಬಾನೇ ನೋಡಲು ಸಿಗುತ್ತದೆ. ಆದರೆ ನಿಮಗೆ ಗೊತ್ತಿರಬಹುದು ನಾವೆಲ್ಲರೂ ಈ ರಸಭರಿತವಾದ ಸೀಬೆ ಹಣ್ಣುಗಳ ರುಚಿ ಆನಂದಿಸಿ ಎಲೆಗಳನ್ನು ನಿರ್ಲಕ್ಷಿಸಿ ಎಸೆಯುತ್ತಾರೆ.

ಆದರೆ ಸೀಬೆ ಎಲೆಗಳೂ ಔಷಧೀಯ ಗುಣಗಳಿಂದ ತುಂಬಿವೆ. ಅನೇಕ ಕಾಯಿಲೆಗಳಿಗೆ ಉತ್ತಮ ಮನೆಮದ್ದು ಎಂದು ಅನೇಕರಿಗೆ ತಿಳಿದಿಲ್ಲ. ಅನೇಕ ಕಾಯಿಲೆಗಳಿಗೆ ವೈದ್ಯನಾಗಿ ಚಿಕಿತ್ಸೆ ನೀಡುವ ಪೇರಲೆ ಎಲೆಗಳ ಮಾಹಿತಿ ಇಲ್ಲಿದೆ ನೋಡಿ….

ಸೀಬೆ ಮರದ ಎಲೆಗಳು ನಮ್ಮ ಆರೋಗ್ಯಕ್ಕೆ ಹಲವು ವಿಧದ ಪ್ರಯೋಜನಗಳನ್ನು ಕೊಡುವಲ್ಲಿ ಯಶಸ್ವಿಯಾಗುತ್ತವೆ. ಇವುಗಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಕೂಡ ಹೆಚ್ಚಾಗಿದೆ. ಇವುಗಳಿಂದ ಸಿಗುವ ಆರೋಗ್ಯ ಲಾಭಗಳನ್ನು ನೋಡುವುದಾದರೆ.

ಸೋಂಕು ನಿವಾರಿಸುವ ಅಂಶಗಳು:

ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಅಪಾರವಾಗಿ ಒಳಗೊಂಡಿರುವ ಸೀಬೆ ಮರದ ಎಲೆಗಳು ತನ್ನಲ್ಲಿ ಹೆಚ್ಚಿನ ನಾರಿನ ಪ್ರಮಾಣವನ್ನು ಕೂಡ ಹೊಂದಿದೆ. ಕರುಳಿನ ಆರೋಗ್ಯಕ್ಕೆ ಅನುಕೂಲಕರವಾಗಿ ಕೆಲಸ ಮಾಡುವ ಸೀಬೆ ಮರದ ಎಲೆಗಳು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವ ಜೊತೆಗೆ ನಮ್ಮ ಸಂಪೂರ್ಣ ಜೀರ್ಣ ಶಕ್ತಿಯನ್ನು ವೃದ್ಧಿಸುವಲ್ಲಿ ನೆರವಾಗುತ್ತದೆ.

ಸಕ್ಕರೆ ಕಾಯಿಲೆ ನಿಯಂತ್ರಣ:

ಬ್ಲಡ್ ಗ್ಲುಕೋಸ್ ಮಟ್ಟದ ನಿಯಂತ್ರಣದಲ್ಲಿ ಕೂಡ ಸೀಬೆ ಮರದ ಎಲೆಗಳು ಬಹಳ ಪ್ರಯೋಜನಕಾರಿಯಾಗಿರುತ್ತವೆ. ಹೀಗಾಗಿ ಸಕ್ಕರೆ ಕಾಯಿಲೆ ಹೊಂದಿರುವ ಜನರಿಗೆ ಸೀಬೆ ಮರದ ಎಲೆಗಳಿಂದ ಹೆಚ್ಚು ಪ್ರಯೋಜನಗಳು ಸಿಗುತ್ತವೆ. ಪ್ರತಿದಿನ ಒಂದೆರಡು ಸೀಬೆ ಮರದ ಎಲೆಗಳನ್ನು ಜಗಿದು ತಿನ್ನುವುದರಿಂದ ಊಟ ಆದ ನಂತರದಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾ ಗುವ ಸಾಧ್ಯತೆ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ:-

ಸೀಬೆ ಮರದ ಎಲೆಗಳು ನಮ್ಮ ರೋಗ ನಿರೋಧಕ ಶಕ್ತಿಯ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತದೆ. ನಮ್ಮ ದೈಹಿಕ ಸೋಂಕುಗಳನ್ನು ನಿವಾರಣೆ ಮಾಡು ವಲ್ಲಿ ಮತ್ತು ಕಾಯಿಲೆಗಳಿಂದ ನಮ್ಮನ್ನು ಕಾಪಾಡುವಲ್ಲಿ ಇದರ ಪಾತ್ರ ತುಂಬಾ ದೊಡ್ಡದು. ಇದರ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಪ್ರಮಾಣ ನಮ್ಮ ದೇಹಕ್ಕೆ ಸಾಕಷ್ಟು ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸುತ್ತದೆ:-

ಸೀಬೆ ಮರದ ಎಲೆಗಳು ನಮ್ಮ ರಕ್ತದಲ್ಲಿ ಇರುವಂತಹ ಬೇಡದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಹೀಗಾಗಿ ಇದು ಹೃದಯಕ್ಕೆ ಮತ್ತು ಹೃದಯ ರಕ್ತನಾಳದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ಕ್ಯಾನ್ಸರ್ ನಿವಾರಕ:-

ಸೀಬೆ ಮರದ ಎಲೆಗಳಲ್ಲಿ ಹೇರಳವಾಗಿ ಕಂಡುಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ಜೀವಕೋಶಗಳ ಹಾನಿ ಸಂಭವಿಸಿ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ತಪ್ಪಿದಂತಾಗುತ್ತದೆ.

ಮುಟ್ಟಿನ ಸಂದರ್ಭದಲ್ಲಿ:-

ಇನ್ನು ಮಹಿಳೆಯರಿಗೆ ಸೀಬೆ ಮರದ ಎಲೆಗಳಿಂದ ಉಪಯೋಗವಿದೆ. ಮುಟ್ಟಿನ ಸಂದರ್ಭದಲ್ಲಿ ಕಂಡುಬರುವ ಹೊಟ್ಟೆ ನೋವಿನ ನಿವಾರಣೆಗೆ ಪರಿಣಾಮಕಾರಿಯಾಗಿ ಸೀಬೆ ಮರದ ಎಲೆಗಳನ್ನು ಬಳಸಲಾಗುತ್ತದೆ. ಇವುಗಳನ್ನು ಸೇವನೆ ಮಾಡುವುದರಿಂದ ನೈಸರ್ಗಿಕವಾಗಿ ನೋವಿನ ನಿವಾರಣೆ ಮಾಡಿಕೊಳ್ಳಬಹುದು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!