HomeGadag Newsಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭ

ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ ಹುಬ್ಬಳ್ಳಿ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಗದಗದಲ್ಲಿ 2024-25ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ, ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭ ನೆರವೇರಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾವಿದ್ಯಾಲಯದ ಅಧ್ಯಕ್ಷ ಎಸ್.ಕೆ. ಪಾಟೀಲ ವಕೀಲರು, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ತುಂಬಾ ಮುಖ್ಯವಾಗಿದೆ. ಅವರ ಮುಂದಿನ ಜೀವನದಲ್ಲಿ ಅತ್ಯುತ್ತಮ ವಕೀಲರಾಗಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸಿ ಎಂದು ಶುಭ ಹಾರೈಸಿದರು.

ಶೈಕ್ಷಣಿಕ ವರ್ಷದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಲ್ಲವಿ ಬುಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕಾದ ಎಸ್.ಐ. ಅಣ್ಣಿಗೇರಿ, ಎಮ್.ವ್ಹಿ. ಹಿರೇಮಠ, ಎಮ್.ಎ. ಕೊರಡಕೇರಿ, ವಿ.ಎಸ್. ಹಿರೇಮಠ, ಡಿ.ಎಲ್. ಕುಲಕರ್ಣಿ, ಎನ್.ಎಲ್. ರಾಠೋಡ, ಎಮ್.ಎಮ್. ಮಡ್ಡಿ ಹಾಗೂ ಉಪನ್ಯಾಸಕಿ ಎಸ್.ಎಸ್. ಪಾಟೀಲ, ಎ.ಆರ್. ಕುರಿ, ಬಿ.ಪಿ. ಹೊತನ್ನಾಳಮಠ, ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಎನ್.ಎನ್. ಮುಲ್ಲಾ ಉಪಸ್ಥಿತರಿದ್ದರು.

ಶಫೀನ ರೋಣದ, ಮುಕುಲ್ ಕುಲಕರ್ಣಿ, ರಮೇಶ ಗುರಿಕಾರ, ಪರಶುರಾಮ ಕೆ ಮತ್ತು ಕೆ. ಪ್ರೇಮಲೀಖಾ ಜಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!