HomeEntertainmentನಿರ್ದೇಶಕ ನಂದ ಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲು

ನಿರ್ದೇಶಕ ನಂದ ಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲು

For Dai;y Updates Join Our whatsapp Group

Spread the love

ನಿರ್ದೇಶಕ ನಂದ ಕಿಶೋರ್‌ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದಿತ್ತು. ಶಬರೀಶ್‌ ಶೆಟ್ಟಿ ಎಂಬ ಯುವ ನಟ ನಂದ ಕಿಶೋರ್‌ ವಿರುದ್ಧ ವಂಚನೆ ಆರೋಪ ಮಾಡಿದ್ದು ಇದೀಗ ಫಿಲ್ಮ್ ಚೇಂಬರ್​​ನಲ್ಲಿ ದೂರು ದಾಖಲಿಸಿದ್ದಾರೆ.

ನಂದ ಕಿಶೋರ್ ವಿರುದ್ದ ಪೊಲೀಸ್ ಠಾಣೆಯಲ್ಲೆ ದೂರು ಕೊಡಬೇಕಿತ್ತು. ಆದರೆ ಕನ್ನಡ ಚಿತ್ರರಂಗ ನಮ್ಮೆಲ್ಲರ ಕುಟುಂಬದಂತೆ. ಕುಟುಂಬದ ಸಮಸ್ಯೆ ನಮ್ಮಲ್ಲೆ ಇತ್ಯರ್ಥ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೇನೆ. ವಾಣಿಜ್ಯ ಮಂಡಳಿ ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸ್ತಾರೆ ಅನ್ನೋ ನಂಬಿಕೆ ಇದೆ ಎಂದು ಶಬರೀಶ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ನರಸಿಂಹಲು, ಚಿತ್ರರಂಗದಲ್ಲಿ ಹೊಸಬರು ಈ ರೀತಿ ಮೋಸ ಮಾಡ್ತಾರೆ. ನಂದ ಕಿಶೋರ್ ಇಷ್ಟು ದೊಡ್ಡ ಹೆಸರು ಮಾಡಿ ಒಬ್ಬ ಕಲಾವಿದನ ಹೆಸರಲ್ಲಿ ಈ ರೀತಿ ವಂಚನೆ ಮಾಡಬಾರದು. ಕನ್ನಡ ಸಿನಿಮಾಗಳ ನೋಡೋಕೆ ಜನರು ಬರುತ್ತಿಲ್ಲ. ಇಂತ ಸಮಯದಲ್ಲಿ ಇಂತ ಘಟನೆಗಳು ಆಗಬಾರದು. ನಂದಕಿಶೋರ್ ಅವ್ರನ್ನ ಚೇಂಬರ್ ಗೆ ಕರೆಸಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಏನಿದು ಘಟನೆ?

ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿರುವ ಶಬರೀಶ್ ಶೆಟ್ಟಿ ಅವರಿಗೆ ನಿರ್ದೇಶಕ ನಂದ ಕಿಶೋರ್ ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ. ಈ ವೇಳೆ ಸಿಸಿಎಲ್ ​​ನಲ್ಲಿ ಆಡಿಸುವುದಾಗಿ ಭರವಸೆ ನೀಡಿ ಶಬರೀಶ್ ಅವರಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ಆದರೆ ಆ ಬಳಿಕ ಸಿಸಿಎಲ್‌ ನಲ್ಲಿ ಅವಕಾಶ ನೀಡದೆ ವಂಚಿಸಿದ್ದಾರೆ. ಜೊತೆಗೆ ಹಣ ಕೇಳಿದಾಗೆಲ್ಲಾ ಸುದೀಪ್‌ ಹೆಸರು ಹೇಳಿ ಯಾಮಾರಿಸುತ್ತಿದ್ದಾರೆ ಎಂದು ಶಬರೀಶ್‌ ಹೇಳಿದ್ದಾರೆ.

‘ನಾನು ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ’. ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ ಈಗ ಹಣವೂ ನೀಡುತ್ತಿಲ್ಲ. ಸಿನಿಮಾದಲ್ಲಿ ಅವಕಾಶವೂ ನೀಡಿಲ್ಲ. ಜೊತೆಗೆ ಸಿಸಿಎಲ್‌ ನಲ್ಲೂ ಆಡಿಸಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಬರೀಶ್‌ ಅಳಲು ತೋಡಿಕೊಂಡಿದ್ದಾರೆ.

‘ನಾನು 200 ಗ್ರಾಂ ಚಿನ್ನ ಅಡವಿಟ್ಟು ಅವರಿಗೆ ಹಣ ಕೊಟ್ಟಿದ್ದೆ, ಆ ಚಿನ್ನದ ಲೋನ್ ಕಟ್ಟಿ ಎಂದೆ ಅದನ್ನು ಕಟ್ಟಲಿಲ್ಲ. ನಾನು ಬಡ್ಡಿ ಕಟ್ಟಿದೆ. ಬಡ್ಡಿಯ ಮೇಲೆ ಬಡ್ಡಿ ಬೆಳೆದು ಆ ಚಿನ್ನವನ್ನು ಹರಾಜು ಹಾಕಲಾಯ್ತು. ನನ್ನ ಬಳಿ ಎಲ್ಲದಕ್ಕೂ ದಾಖಲೆ ಇದೆ. ನಾನು ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ‌ನನ್ನ ತಡೆಯಲಾಯ್ತು. ಈ ವಿಷಯವನ್ನು ಶಿವಣ್ಣ, ಸುದೀಪ್ ಸರ್ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

 

 

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!