ಬೆಂಗಳೂರು: ನಾನು ಮುಖ್ಯಮಂತ್ರಿ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಅವರು ಸಿಎಂ ಆದಾಗ ಬೇಕಿದ್ರೆ ಗ್ಯಾರಂಟಿ ನಿಲ್ಲಿಸಲಿ. ಎಲ್ಲಿ ಅಭಿವೃದ್ಧಿ ನಿಂತಿದೆ? ಅಭಿವೃದ್ಧಿ ಕಾಮಗಾರಿಗೆ ಸಿಎಂ ಅಡಿಗಲ್ಲು ಹಾಕ್ತಿದ್ದಾರೆ. ನಮ್ಮ ಜಿಲ್ಲೆಗೆ ಸಿಎಂ ಮೂರು ಬಾರಿ ಭೇಟಿ ಕೊಟ್ಟಿದ್ದಾರೆ. ನವೆಂಬರ್ 7ಕ್ಕೆ ತುಮಕೂರು ವಿಶ್ವವಿದ್ಯಾಲಯ ಉದ್ಘಾಟನೆಗೆ ನನಗೆ ಸಿಎಂ ಹೇಳಿದ್ದಾರೆ.
ತುಮಕೂರಿನ ಸರ್ಕಾರಿ ಆಸ್ಪತ್ರೆ ಕಟ್ಟಲು 130 ಕೋಟಿ ಮಂಜೂರು ಆಗಿದೆ. ಸರ್ಕಾರಿ ನರ್ಸಿಂಗ್ ಕಾಲೇಜು, ಇವೆಲ್ಲವೂ ಅಭಿವೃದ್ಧಿ ಅಲ್ಲವಾ..? ಅಭಿವೃದ್ಧಿ ಕುಂಠಿತ ಅಂದರೆ ಹೇಗೆ..? ಇವರು ಹೇಳಿದ್ರೆ ಮಾತ್ರ ಅಭಿವೃದ್ಧಿ ಕುಂಠಿತ ಆಗಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ, ಆದರೆ ಅದೇನು ಸರ್ಕಾರದ ಅಭಿಪ್ರಾಯ ಆಗೋದಿಲ್ಲವಲ್ಲ. ಸರ್ಕಾರ ಯೋಚಿಸಿಯೇ ಗ್ಯಾರಂಟಿ ಕೊಟ್ಟಿರೋದು ಎಂದು ದೇಶಪಾಂಡೆ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.



