HomeGadag Newsನಿರಂತರ ಅಧ್ಯಯನ, ಪರಿಶ್ರಮದಿಂದ ಯಶಸ್ಸು: ನ್ಯಾ. ಶ್ರೀನಿವಾಸ ಹರ್ಷಕುಮಾರ

ನಿರಂತರ ಅಧ್ಯಯನ, ಪರಿಶ್ರಮದಿಂದ ಯಶಸ್ಸು: ನ್ಯಾ. ಶ್ರೀನಿವಾಸ ಹರ್ಷಕುಮಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಯುವ ವಕೀಲರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳಲ್ಲಿ ಕಾರ್ಯನಿರ್ವಹಿಸಲು ಮುಂದಾಗುತ್ತಿದ್ದಾರೆ. ಆದರೆ, ಮೇಲುಹಂತದ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಯಾವ ಆಧಾರ ಮತ್ತು ಯಾವ ಕಾನೂನು ಅಡಿಯಲ್ಲಿ ಮಂಡನೆ ಮಾಡಬೇಕು ಎಂಬುದು ಕಷ್ಟದ ಕಾರ್ಯವಾಗುತ್ತದೆ. ಆದ್ದರಿಂದ ಯುವ ವಕೀಲರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕಣಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದರೆ ಪ್ರಕರಣದ ಮೂಲವನ್ನು ಮತ್ತು ಸತ್ಯಾಸತ್ಯತೆಯನ್ನು ಅರ್ಥೈಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಶ್ರೀನಿವಾಸ ಹರ್ಷಕುಮಾರ ಹೇಳಿದರು.

ಶಹರದ ಕೆ.ಎಲ್.ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯ ಹಾಗೂ ಕೆ.ಎಲ್.ಇ. ಲಾ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ರಾಷ್ಟç ಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆ ಕಾರ್ಯಮಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ವಿದ್ಯಾರ್ಥಿಗಳು ಕಾನೂನು ಪದವಿ ಪಡೆದುಕೊಂಡ ನಂತರ ಮೂರು-ನಾಲ್ಕು ತಿಂಗಳಗಳ ಕಾಲ ನ್ಯಾಯಾಲಯದ ಪ್ರಕ್ರಿಯೆಯನ್ನು ತಿಳಿದುಕೊಂಡು ಜೀವನ ಮತ್ತು ಪ್ರಕರಣವನ್ನು ಯಾವ ಹಂತದಲ್ಲಿ ಮುಂದುವರೆಸಿಕೊAಡು ಹೋಗಬೇಕು ಎಂಬುವುದನ್ನು ತಿಳಿಯದೇ ವೃತ್ತಿಯನ್ನು ತ್ಯಜಿಸಿದ ಉದಾಹರಣೆಗಳು ಇವೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿ ಹಂತದಲ್ಲಿಯೇ ಕಾಲೇಜುಗಳಲ್ಲಿ ನಡೆಯುವ ಅಣುಕು ನ್ಯಾಯಾಲಯ, ಅಣುಕು ರಾಜಿ ಸಂಧಾನ, ಚರ್ಚಾ ಸ್ಪರ್ಧೆಗಳಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮನ್ನು ತಾವು ಸಮರ್ಥರನ್ನಾಗಿ ಮಾಡಿಕೊಂಡು ನ್ಯಾಯಾಲಯದ ಮುಂದೆ ಹಾಜರಾದಾಗ ಪಕ್ರರಣಗಳನ್ನು ಪ್ರಬುದ್ಧರಾಗಿ ಎದುರಿಸುಲು ಸಹಕಾರಿಯಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ನಿರಂತರವಾಗಿ ಅಧ್ಯಯನ ಮತ್ತು ಕಠಿಣ ಪರಿಶ್ರಮ ವಹಿಸಿದಾಗ ಮಾತ್ರ ನಾವು ಸಮಾಜದಲ್ಲಿ ಹೆಸರು ಮತ್ತು ಹಣ ಗಳಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ಹೈಕೋಟ್ ನ್ಯಾಯಾಧೀಶ ಉಮೇಶ ಮಂಜುನಾಥಭಟ್ಟ ಅಡಿಗ ಮಾತನಾಡಿ, ವಕೀಲ ವೃತ್ತಿಯಲ್ಲಿ ದಾವೆಗೆ ಸೂಕ್ತವಾಗಿರುವುದು ವಾದ ಪತ್ರವಾಗಿದೆ. ಆದ್ದರಿಂದ ಯುವ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ವಾದ ಮತ್ತು ಪ್ರತಿವಾದ ಪತ್ರಗಳನ್ನು ಚೆನ್ನಾಗಿ ಬರೆಯಬೇಕು. ಕಾನೂನು ಕೇವಲ ಒಂದು ಪುಸ್ತಕ ಅಲ್ಲ, ಅದು ಸಮುದ್ರವಿದಂತೆ. ಹಾಗಾಗಿ ವಿದ್ಯಾರ್ಥಿಗಳು ಕಾನೂನುಗಳನ್ನು ಅರ್ಥೈಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ ಎಂದರು.

ಬೆಂಗಳೂರು ಕೆ.ಎಲ್.ಇ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಎಂ. ಮಲ್ಲಿಕಾರ್ಜುನಯ್ಯ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ, ಎಸ್.ಎ. ಮಾನ್ವಿ, ಸಿ. ಬಸವರಾಜ ಸೇರಿದಂತೆ ಇತರರಿದ್ದರು. ಎಸ್.ಎ ಮಾನ್ವಿ ಕಾಲೇಜಿನ ಪ್ರಾಚಾರ್ಯ ಜೈಹನುಮಾನ ಎಚ್.ಕೆ ಸ್ವಾಗತಿಸಿದರು. ಉಪನ್ಯಾಸಕ ಡಾ.ವಿಜಯ ಮುರದಂಡೆ ವಂದಿಸಿದರು.

 

  • ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಟಿ.ಜೆ. ಶಿವಶಂಕ್ರಗೌಡ ಮಾತನಾಡಿ, ಸಂವಿಧಾನಕ್ಕೆ ಅಗೌರವ ತೋರಿಸುತ್ತಿರುವವರು ವಿದ್ಯಾವಂತರೇ ಆಗಿದ್ದಾರೆ. ಇದರಿಂದ ಸಂವಿಧಾನದ ಗೌರವಕ್ಕೆ ಧಕ್ಕೆಯಾಗುತ್ತಿದೆ. ವಿದ್ಯಾರ್ಥಿಗಳು ಇಲ್ಲಿ ನಡೆಯುವ ಅಣುಕು ನ್ಯಾಯಾಲಯಗಳಲ್ಲಿ ಸಂವಿಧಾನದ ಮೂಲ ಯಾವುದು ಎಂಬುವುದನ್ನು ಅರಿತುಕೊಂಡು ಸಮಾಜದಲ್ಲಿ ಸಂವಿಧಾನದ ಗೌರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!