ಮೈಸೂರು:- ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ನಕಲಿ ಸಿಗರೇಟ್ ಮತ್ತು ಹನ್ಸ್ ಉತ್ಪನ್ನಗಳ ದಾಸ್ತನು ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಬರೋಬ್ಬರಿ 70 ಲಕ್ಷ ಮೌಲ್ಯದ ಐಟಿಸಿ ಕಂಪನಿಯ ನಕಲಿ ಸಿಗರೇಟ್ ಹಾಗೂ ಹನ್ಸ್ ವಶಕ್ಕೆ ಪಡೆದಿದ್ದಾರೆ.
ನಗರದ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಇಟ್ಟಿಗೆಗೂಡಿನ ಅರುಣಾಚಲಂ ಸ್ಟ್ರೀಟ್ನಲ್ಲಿರುವ ಮನೆಯೊಂದರಲ್ಲಿ ನಕಲಿ ಸಿಗರೇಟ್ ಸಂಗ್ರಹಿಸಿದ್ದರು. ಈ ಹಿನ್ನಲೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಆತನ ಮಾಹಿತಿ ಮೇರೆಗೆ ನಂಜನಗೂಡಿನ ರಿಂಗ್ ರಸ್ತೆಯ ಕೋಟೆಹುಂಡಿ ಫ್ಯಾಕ್ಟರಿ ಮೇಲೆ ಸಿಸಿಬಿ ಪೊಲೀಸರ ದಾಳಿ ನಡೆಸಿ, ಲಕ್ಷಾಂತರ ಮೌಲ್ಯದ ತಂಬಾಕು ಹಾಗೂ ನಕಲಿ ಉತ್ಪನ್ನಗಳ ಪರಿಕಾರಗಳನ್ನ ವಶಕ್ಕೆ ಪಡೆಯಲಾಗಿದೆ.



