ಕಾರವಾರ:- ಜಿಲ್ಲೆಯ ಭಟ್ಕಳ ಬಳಿಯ ಕುಕನೀರ್ ವೆಂಕಟಾಪುರ ಹೊಳೆಯ ದಂಡೆಯ ಬಳಿ ಗರ್ಭಧರಿಸಿದ್ದ ಗೋವನ್ನು ಹತ್ಯೆಗೈದು ಮಾಂಸ ಸಾಗಾಟ ಮಾಡಿ ದುರುಳರು ವಿಕೃತಿ ಮೆರೆದಿರುವ ಘಟನೆ ಜರುಗಿದೆ.
ಈ ದುರುಳರು, ಮಾಂಸಕ್ಕಾಗಿ ದನವನ್ನು ವಧೆ ಮಾಡಿ ಕರುವಿನ ಭ್ರೂಣ ಹಾಗೂ ಅಂಗಾಂಗಗಳನ್ನು ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದಾರೆ. ಬೀದಿ ನಾಯಿಯೊಂದು ಚೀಲವನ್ನು ಎಳೆದುತಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಗೋ ಹತ್ಯೆ, ಗೋವುಗಳ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಇನ್ನು ಗೋಹತ್ಯೆ ಬಗ್ಗೆ ಹಿಂದೂ ಸಂಘಟನೆಗಳು ಧ್ವನಿ ಎತ್ತುತ್ತಿದ್ದರೂ ರಾಜ್ಯದಲ್ಲಿ ಗೋವುಗಳ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ. ರಕ್ಕಸರಂತೆ ಗೋವುಗಳನ್ನು ಹತ್ಯೆ ಮಾಡಿ ದಾರಿ ಬದಿ ಮೂಳೆ, ಮಾಂಸಗಳನ್ನು ಬಿಸಾಡುತ್ತಿದ್ದಾರೆ.



