HomeKarnataka NewsCrime News: ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿ - ಡೆತ್ ನೋಟ್ ನಲ್ಲಿ...

Crime News: ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿ – ಡೆತ್ ನೋಟ್ ನಲ್ಲಿ ಏನಿದೆ?

For Dai;y Updates Join Our whatsapp Group

Spread the love

ಬೆಳಗಾವಿ:- ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ಪತಿ ಡಿಯಾಂಗೋ ನಜರತ್ (83) ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೆ, ಇವರ ಪತ್ನಿ ಪ್ಲೇವಿಯಾನಾ ನಜರತ್ (79) ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗಳು ಖಾನಾಪುರ ತಾಲೂಕಿನ ಬೀಡಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಮಕ್ಕಳೇ ಇಲ್ಲದ ದಂಪತಿಗೆ ತಮಗೆ ತಾವೇ ಎಲ್ಲವೂ ಆಗಿದ್ದರು. ಆದ್ರೆ, ಸೈಬರ್ ಕಿರಾತಕರ ಕಿರುಕುಳಕ್ಕೆ ವೃದ್ಧ ದಂಪತಿ ದುರಂತ ಸಾವುಕಂಡಿದೆ.

ಸ್ಥಳಕ್ಕೆ ಭೇಟಿ ನೀಡಿದ ನಂದಗಡ ಠಾಣೆ ಪೊಲೀಸರು ಮಾಹಿತಿ ಪಡೆದು ರೂಮ್ ನಲ್ಲಿ ಹುಡುಕಾಟ ನಡೆಸಿದಾಗ ಎರಡು ಪುಟದ ಒಂದು ಡೆತ್ ನೋಟ್ ಕೂಡ ಸಿಕ್ಕಿದ್ದು, ಅದರಲ್ಲಿ ಬರೆದ ವಿಷಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ.

ಇನ್ನೂ ವಿಚಾರ ಗೊತ್ತಾಗುತ್ತಿದ್ದಂತೆ ಶವಗಳನ್ನ ಖಾನಾಪುರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡಾ ಅಂತಾ ಹೇಳಿ ಇಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಖುದ್ದು ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಮಾಹಿತಿ ಪಡೆದು ಒಂದು ತಂಡ ರಚನೆ ಮಾಡಿ ತನಿಖೆಗೆ ಸೂಚನೆ ನೀಡಿದರು.

ಡೆತ್ ನೋಟ್ ನಲ್ಲಿ ಬರೆದ ಅಂಶ ಏನು?

ಸೈಬರ್ ವಂಚಕರು ಕೆಲ ದಿನಗಳ ಹಿಂದೆ ವೃದ್ಧ ಡಿಯಾಂಗೋಗೆ ವಿಡಿಯೋ ಕಾಲ್ ಮಾಡಿದ್ದಾರೆ. ನಿಮ್ಮ ಫೋಟೊಗಳನ್ನ ಬಳಿಸಿಕೊಂಡು ಯಾರೋ ಸೈಬರ್ ವಂಚನೆ ಮಾಡಿದ್ದು ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೇಳಿ ಹೆದರಿಸಿದ್ದಾರೆ. ಬಳಿಕ ತಮ್ಮ ಮೇಲಾಧಿಕಾರಿಗಳು ಮಾತಾಡ್ತಾರೆ ಎಂದು ಕರೆಯನ್ನ ಬೇರೆಯವರಿಗೆ ಟ್ರಾನ್ಸ್ಪರ್ ಮಾಡಿದ್ದು, ಅವರು ಕೂಡ ಆರಂಭದಲ್ಲಿ ಇವರಿಗೆ ಹೆದರಿಸಿದ್ದಾರೆ.

ವಂಚನೆಯಾದ ಹಣವನ್ನ ನೀವು ಕಟ್ಟಿದ್ರೇ ನಿಮ್ಮನ್ನ ನಾವು ಸೇಪ್ ಮಾಡುತ್ತೇವೆ ಎಂದು ಹೇಳಿ ಆರಂಭದಲ್ಲಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ಬ್ಯಾಂಕ್ ಅಕೌಂಟ್ ನಂಬರ್ ನೀಡಿ ಅದಕ್ಕೆ ಆರ್ ಟಿ ಜಿಎಸ್ ಮಾಡಿಸಿಕೊಂಡಿದ್ದಾರೆ. ಹೀಗೆ ಸುಮಾರು ಬಾರಿ ಕರೆ ಮಾಡಿ ಹೆದರಿಸಿ ಸುಮಾರು 50 ಲಕ್ಷ ರೂ. ವರೆಗೂ ಹಣವನ್ನ ಹಾಕಿಸಿಕೊಂಡಿದ್ದಾರೆ. ಗೋಲ್ಡ್ ಅಡವಿಟ್ಟು ಏಳು ಲಕ್ಷ, ನಿವೃತ್ತಿಯಾದಾಗ ಬಂದಿದ್ದ ಸುಮಾರು ನಲವತ್ತು ಲಕ್ಷ ಸೇರಿ ಐವತ್ತು ಲಕ್ಷ ಹಣವನ್ನ ಸೈಬರ್ ವಂಚಕರು ಹೇಳಿದ ಹಾಗೇ ಹಾಕುತ್ತಾ ಹೋಗಿದ್ದಾರೆ. ಇದಾದ ಬಳಿಕ ಮೊನ್ನೆ ಖುದ್ದು ಡಿಯಾಂಗೋ ಕರೆ ಬಂದ ನಂಬರ್ ಗೆ ಕಾಲ್ ಮಾಡಿದ್ದಾರೆ. ಆದ್ರೆ, ಅವರು ರಿಸೀವ್ ಮಾಡದಿದ್ದಾಗ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಹಾಕಿದ್ದಾರೆ. ಆದರೂ ರಿಪ್ಲೈ ಬಾರದಿದ್ದಾಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!