ಬೆಂಗಳೂರು: ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡ್ತಿದ್ದ ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದಾರೆ. ಟ್ರಾಲಿ ಬ್ಯಾಗ್ ನಲ್ಲಿ ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ, ಕೆಂಪು ಇಲಿ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳನ್ನು ಅಡಗಿಸಿಟ್ಟಿದ್ದರು.
40 ಬಾಕ್ಸ್‌ಗಳಲ್ಲಿದ್ದ ವಿವಿಧ ಬಗೆಯ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಾಣಿಗಳನ್ನ ತಂದಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ಪರಿಶೀಲನೆ ವೇಳೆ ಬಾಕ್ಸ್‌ನಲ್ಲಿ ಪ್ರಾಣಿಗಳಿರುವುದು ಪತ್ತೆ ಆಗಿದೆ. ಕೌಲಲಾಂಪುರದಿಂದ MHO192 ವಿಮಾನದಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ತಂದಿದ್ದರು. ಸದ್ಯ ಅಕ್ರಮ ಪ್ರಾಣಿಗಳ ಸಾಗಾಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.



