ದಾವಣಗೆರೆ:- ವಿದ್ಯುತ್ ಶಾಕ್ ಹೊಡೆದು 17 ತಿಂಗಳ ಮಗು ದುರ್ಮರಣ ಹೊಂದಿರುವ ಘಟನೆ ಹೊನ್ನಾಳಿಯ ಸೊರಟೂರು ಗ್ರಾಮದಲ್ಲಿ ಜರುಗಿದೆ.
ಮಂಜು ಮೃತ ಮಗು ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮನೆಯಲ್ಲಿ ಮೋಟರ್ ಆನ್ ಮಾಡಿ ನೀರು ತುಂಬಿಸುವಾಗ ಈ ಘಟನೆ ನಡೆದಿದೆ. ಆಟವಾಡುತ್ತಿದ್ದಾಗ ಮಗು ನೀರಿನ ಮೋಟರ್ ಹಿಡಿದುಕೊಂಡಿದೆ. ಇದರಿಂದ ಮಗುವಿಗೆ ವಿದ್ಯತ್ ಶಾಕ್ ಹೊಡೆದಿದ್ದು, ಮಗು ಸ್ಥಳದಲ್ಲೇ ಸಾವಿಗೀಡಾಗಿದೆ.
ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



